ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ಮೈರಾವಣನ ಕಾಳಗ ಪರಶು ತೋಮರ ಕುಂತವಸಿ ಮು | ದರ ಮುಸುಂಡಿ ಗದಾತಿಭಲ್ಯದ || ಸರಳ ಧನು ಕಕ್ಕಡೆಯ ಭಾರಿಯ ಭಂಡಿವಾಳಗಳ | ಪರಿಘವಂಕುಶ ಶಕ್ತಿಕೌಡಿಯ | ಹರಿಗೆ ಖಂಡೆಯ ಸಬಳ ಮೊದಲಾ | ದುರುತರದ ಬತ್ತೀಸ ಕೈದುಗಳೆಸೆದುವಗಲದಲಿ || ೮ || ಜೋಡು ಸೀಸಕ ಬಾಹು ರಕ್ಷೆಯ || ಮಡಿಗೆಯ ಮೊಜ್ಜೆಯದ ಸವಗದ | ನೀಡುಗಳ ಗಬ್ಬಿಗೆಯ ಮೊಗರಂಬಗಳ ಹಣದ || ಖೇಡಯದ ಗುಳ ಜಂಜೆ ಹೊರಜೆಯ | ದಾಡೆ ಸೂನಗೆ ನಿಗಳ ಪಟ್ಟಿಯ || ನಾಡೆ ಕಟ್ಟಿಗೆ ಕೊಡಲಿಗಳಿನೊಪ್ಪಿದುದು ರಣರಂಗ ||೯|| ಆರದೆರೆದ ಕಣ್ಣುಗಳ ತುಡುಕುವ || ನೆರೆದ ವಾಯಸತತಿಯ ಮುಂಡದ || ಜರಿವ ಖಂಡದ ಕಿಡಿಕಿರಿದ ಕಬ್ಬಕ್ಕಿ ವರ್ಬುಗೆಯ || ಪರಿಪರಿಯ ಹೆಣದಡಗ ಕೀುವ ಹಿರಿಯ ಶುನಕನ ಸಂಕುಲಂಗಳ | ಕರುಳ ಕಟವಾಯಿಗಳ ಜಂಬುಕನಿಕರವೊಪ್ಪಿದುದು ||೯೧|| ಉಡಿದ ಕೈಕಾಲುಗಳ ರುಂಡವ || ನಡಸುತಿಹ ಶಾಕಿನಿಯ ಮೊತ್ತದ || ನಿಡುಗರುಳ ನೆಣವಸೆಯ ನುಂಗುವ ಭೂತಸಂಕುಲದ || ಒಡಲ ಬಗಿಬಗಿದಡಗ ತಿನ್ನುತ | ದಡಿಗ ಪ್ರೇತಪಿಶಾಚ ರಕುತವ | ಕುಡಿದು ಸೊಕ್ಕಿದ ಭೂತವೇತಾಳಂಗಳೊಪ್ಪಿದುವು ||೯೨|| ನಿಂದ ರಕುತದ ಮಡುವಿನೊಳಗಾ | ನಂದದಿಂ ಮುಲುಗಾಡಿ ತನ್ನೊಳು || ಸಂದಣಿ ಹೊನ್ನೊಬ್ಬರೊಬ್ಬರನಿಡುತ ಖಂಡದಲಿ ||