ಮೈರಾವಣನ ಕಾಳಗ | ಆವನದ ಮಧ್ಯದಲ್ಲಿ ಬೆಳೆದಿಹ | ತಾವರೆಯ ಕೊಳದೊಳಗೆ ಮಿಂದನು | ದೇವರಾಘವನಿದ್ದೆಡೆಗೆ ಮೆಯ್ಯಕುತೈತಂದ || ತೀವಿದುತ್ಸಾಹದಲಿ ವಂದಿಸಿ | ಭಾವಿಸುತಲಾರಾಮರ್ತಿಯ | ಪಾವನದ ನಾಮವನ್ನು ನೆನೆಯುತ್ತಿರ್ದನಾಹನುಮ ||೯೮|| ನೀಲಮೇಘನು ಒಂದು ಹನುಮನ || ಕಾಲಿಗೆಗಿದೊಡೆತ್ತಿದನು ತರ | ಹೇಮಿ ಮಂಗಳವಸ್ತುಗಳನೆನೆ ತಂದರಾಕೃಣಕೆ || ಸಾಲಸಚಿವರ ಗಡಣದಲಿ ರಾ | ಚಾಲಯಕೆ ಕರೆತಂದು ಸಿಂಹದ | ಮೇಲುಸೀತವ ತರಿಸಿದನು ಹನುಮಂತ ಹರ್ಷದಲಿ ||೯೯|| ಕರೆ ಕುಮಾರನನೆನುತ ಬೇಗನೆ | ಕರೆಸಿದನು ಭೂದೇವತತಿಯನು | ವರರತುನಸಿಂಹಾಸನದ ಮೇಲಿರಿಸಿ ಖಳಪತಿಯ || ಶಿರದೊಳಭಿಷೇಕವನ್ನು ಮಾಡಲು | ಕರವೆಸೆವ ಪಟ್ಟವನು ನೊಸಲೊಳು | ಮರುತನಂದನ ಬಿಗಿದ ಶುಭಲಗ್ನದಲಿ ನೆರೆ ಹರಸಿ ||೧೦೦ ಮಂಗಳಾರತಿಯೆತ್ತಿದರು ದನು | ಚಾಂಗನೆಯರಾನೀಲಮೇಘಗೆ | ಕಂಗೊಳಿಸ ಬಯವಾದ್ಯ ಮೋಳಿಗಿದುವುಳಹರ್ಷದಲಿ || ತುಂಗನಿಗಮದ ಭೂಸುರರ ಮಂ | ತ್ರಂಗಳಿ೦ದಕ್ಷತೆಯ ಚೆಲ್ಲಲು | ಸಿಂಗರದೊಳಾನೀಲಮೇಘನು ಮೆರೆದನೊಲವಿನಲಿ ||೧೦೧|| ತಂದು ಕಾಣಿಕೆಯಿಕ್ಕಿದರು ಜನ | ವೃಂದ ಕಂಡುದು ನೀಲಮೇಘನ | ಕುಂದದುಡುಗೊ ಸಹಿತ ವೀಳಯ ವಿನೋಲವಿನಲಿ ||
ಪುಟ:ಮಹಿರಾವಣನ ಕಾಳಗ.djvu/೭೬
ಗೋಚರ