ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ವಾಸಂ ೯೭ ವ|| ಎಂಬುದುಂ ಬೇರೊಂದೆಡೆಯೊಳೂರ ಸಬ್ಬ ವಕಾರಿ ತನ್ನೆಡೆ ಸಂದಿಗ್ಧ ಪಣಿಗಳ೦ ನೋಡಿ ನುಡಿದಳ ದೆಂತೆನೆ ||೧೦೬ || ಕಂ || ಇವನೇಂ ಶಚಿಯೊಡಗೂಡಿದ | ದಿವಿಜೇಂದ್ರನೊ ರೋಹಿಣೀಸಮೇತಂ ರಾಕೇ೦ || ದುವೊ ರತಿಯೊಡಗೂಡಿದ ಕಂ | ತುವೊ ಪುಣ್ಯಮೆನಿತ್ತೊ ಈತನಂ ವರಿಸಿದಳಾ ||೧೦೭|| ವು ಎಂದಿಂತು ತಮ್ಮ ಬಗೆಗೊಪ್ಪಿದಂದದಿಂದೆಲ್ಲರುಂ ಸಲ್ಲಾಪಂ ಗೆಯ್ಯುತುಮಿರಲಲ್ಲಲ್ಲಿ ಮುಂಮುಂದೆ ಕನ್ನೆವೆಂಗಳೊಡನೊಡನೆ ಸಡಗರಿಸು ತಿದಿರೆವಂದು ||೧ov|| ವೃ || ಆರತಿಯೆತ್ತುವೆವೀರುಚಿರಾಂಗಂ || ಗರತಿವಲ್ಲಭನೋರಗೆಯಾದಂ || ಗೀರಸೆಯೊಜಿತಾರಿಗೆ ಚಾವೋ | ರಮಣಂಗತಿಧೀರಗುಣಂಗೆ ||೧೦೯|| ಯಾದವವಂಶಮಹೋದಧಿಚಂದ್ರಂ || ಗಾದಿಮಪೂರುಷಪಾದವಿನಮ್ರ || ಗಾದರದಿಂ ಶಿತಖೇದಕರಂಗಾ | ಪಾದಿಸಜ್ಜನಮೋದಭರಂಗೆ {{೧೧೦|| ವ|| ಎಂದಿಂತಿಂತು ಮಂಗಳಗೀತಂಗಳಂ ಪಡುತುವಾರತಿಯಂ ಬೆಳ ಗಿಕುಭಮಂ ಪರಸಲಾ ಹರಕೆಗಳಂ ಕಯೊಳು ತುಮುತ್ಸವಂಮರೆದಾಜನಸಂ ಜಯವಿಜಯೂಾಭವ ಎಂದು ಕೈವಾರಿಸುವ ನಂದಿಜನಸಂದೋಹದಿಂ ಕೃತಸಂ ಬಾಧವಂ ಸೌಧಮಂ ಪ್ರವೇಶಿಸಿ ಬಳಿಕವೊಂದುದಿನಂ ವಿವಾಹಾಂಗವೆನಿಸಿ ದೋಕುಳಿಯನಾಡಿದನದೆಂತನೆ ||೧೧|| ವ್ಯ | ಕರಾಕಲಿತಚಾರುಶೃಂಗಮಯನಾಳಿಕಾಯಂತ್ರದಿಂ | ಪರಿಮಳಝರೀಮಿಳನ್ನು ಸೃಣವಾರಿಸಂಪಾತದಿಂ || ಕರೀಂದ್ರತತಿ ಸುಂಡಿಲಿಂ ತೆಗೆದು ಸೂಸುವಂತಂಬುವಂ | ಧರಾವರಕುಮಾರರೋಕುಳಿಯನಾಡಿದಶ್ಲೀಲೆಯಿಂ ||೧೧೨||