೧೧೦ ಮಹಿಶೂರ ಮಹಾರಾಜ ಚರಿತ್ರಂ ವ|| ಇಂತಿರ್ಪುಗಳನರಪತಿ ತನ್ನ ರಸಿಗೆ ತೃತೀಯಗರ್ಭೋದಯ ಮಾದುದು ತಿಳಿದು ಶಾಸ್ಪೋಕಪ್ರಕಾರದಿಂದತಿವಿಭವದಿಂದೆಸಗಿದ ಪುಂಸ ವನಂ ಭಗವತೃಪೆಯಿಂ ಸಾರ್ಥಕಮಕ್ಕೆಂದು ||8|| ವ್ಯ|| ಚಾದಗೆಗಳ್ಳ ವೀನಜಲದಾಗಮಮಂ ಕಮಲಾಕರಂಗಳ | ರ್ಕೊದಯಮಂ ವಸಂತಸಮಯೋದಯಮಂ ಪಿಕಸಂಕುಲಂ ಶಶಾಂ || ಕೋದಯಮಂ ಚಕೋರವಿಗಂಗಳಪೇಕ್ಷಿಸುವಂತೆ ರಾಜಪು | ದಯಮಂ ಕಡಂಗಿ ಸಕಲಪ್ರಜೆಯುಂ ಬಯಸುತ್ತುಮಿರ್ಪ್ಪಿನಂ ||೪೮|| ಕಂ|| ಜನಿಯಿಸಿದತ್ತಾವಸುಧೇಂ | ದ್ರನ ರಾಣಿಯ ಗರ್ಭವೆಂಬ ಗಣಿಯಲ್ಲಿ ಜಗ || ದ್ವಿನುತಾನೇಕಗುಣಾನ್ವಿತ | ಮನುಪಮಮಮಲಂ ಕುಮಾರರತ್ನವನರ್ಘ೦ ||೪೯ !! ಕಂ|| ಆನೃಪಕುಮಾರನುದಿಸೆ ಜ | ನಾನಂದಾತಿಶಯನಂದದೇಂ ಹೆರ್ಚ್ಚಿತೊ ತಾ | ರಾನಾಥನುದಯದೊಳಾ ಕಾನಿಶೆಯೊಳ್ತಾರಿರಾಶಿ ಪೆರ್ಚುವ ತೆರದಿಂ ||೫|| ವ|| ಅಂತು ಪುತ್ಸವಮಾಗೆ, ಕಂ|| ವಿರಚಿಸಿದಳ್ಳುಲದೇವತೆ || ಪರಮಾನುಗ್ರಹಮನೆಮ್ಮೊ ಳಿಂದೆಮ್ಮ ಕುಲಂ || ಪಿರಿದೇಳೆ ವಡೆದುದೆಂದಾ || ಧರಣಿಪನೋಲಾಡಿದಂ ಪ್ರಮೋದಾಂಬುಧಿಯೊಳ್ ||೫|| ವ|| ಆಗಳಾ ಪುರಜನಮೆಲ್ಲಮುಂ ರಾಜಕುಮಾರನುದಯಕ್ಕೆ ಸಂತ ಸಂಬಟ್ಟು ಕೇರಿಕೇರಿಯೊಳೊಸಗೆಯ ಪಸದನವನೆಸಗಿ ಬೀದಿಬೀದಿಯೊಳ್ ಇನಿತು ಸಕ್ಕರೆಯಂ ಬೀರುತ್ತೆ ಸಂತಸಂಮಿಕ್ಕಾಪಗಲಂ ಕಳೆದು ಬೈಗುಂ ಬೊಳ್ಪುದುಂ ||೨|| ವೈ|| ಪುರದೊಳಮಂದಹರ್ಷಭರದಿಂದಮದಲ್ಲಿಯುಮೆಲ್ಲಿಯುಂ ವಿಭಾ | ವರಿಯೊಳಗುತ್ಸವಕ್ಕೆ ನೆರಪಿ ಪರಸ್ಕೃತದೀಪಸಂಕುಲಂ ||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೨೫
ಗೋಚರ