ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ | ಅಮಾಶ್ವಾಸಂ. ಕಂ|| ಶ್ರೀಮದ್ವೇಂಕಟನಾಯಕ || ನಾಮದೆ ಪದ್ಮಾವತೀಶನೆನಿಸಿರೋಡಾ || ಭೂಮಿಯೊಳಜಾಂಡಕೋಟಿ | ಸ್ವಾಮಿಯೆನಿಪ್ಪಾತ್ಮನೋವುಗೆಮ್ಮಯ ನೃಪನಂ ||೧|| ಇಂತಿರ್ಪ್ಪ ಬಳಿಯಮಾಭೂ | ಕಾಂತನ ಸತಿ ಪಡೆದಳೆರಡನೆಯ ಸಿರಿಮಗನಂ || ಪಿಂತಿಂದ್ರಾನುಜನಂ ಪಡೆ | ದಂತಿರೆ ತಾನದಿತಿ ಪುಂಡರೀಕಾಂಬಕನಂ ||೨|| ೦ತಕುಮಾರಂ ಪುಟ್ಟಿದ ಸಂವತ್ಸರಮಾಸಪಕ್ಷ ತಿಥಿವಾರನಕ್ಷ ತ್ರಂಗಳಾತಕಭಿನಂದನೀಯಗುಣಂಗಳಂ ಸೂಚಿಸುತ್ತಿರುವದೆಂತೆನೆ ||೩! ಕಂ|| ಧರಣೀತಲಸತ್ವಧುರಂ || ಧರನೆನುತುಂ ಸತ್ವಧಾರಿವರ್ಷದೆ ತೋರು೦ || ಸಿರಿಯಾಣ್ಮನೀತನೆನುತುಂ | ವರಮಾಧವಮಾಸದಿಂದೆ ನಿಸದಂ ತೋರುಂ ||೪|| ಯುವರಾಜಕೃಷ್ಣ ಪಕ್ಷದೊ | ಆವನಿರ್ಪ್ಪನೆನುತ್ತೆ ಕೃಷ್ಣ ಪಕ್ಷದೆ ತೋರುಂ || ತವಿಪಂ ರುದ್ರನವೋಲರಿ | ನಿವಹನನೆಂದಪುದು ರುದ್ರದೈವತತಿಥಿಯುಂ ||೫|| ಮಂಗಳವಾರದೆ ತೋರುಂ | ಮಂಗಳಕರನೆನುತುಮಶ್ವಿನೀತಾರೆಯಿನು || ತುಂಗತರವೈಭವಂ ರುಚಿ | ರಾಂಗಂ ಶ್ಲಾವ್ಯಮತಿಶಾಲಿಯೆನುತುಂತೋರುಂ ||೬|| ವ| ಅಂತು ಪುಟ್ಟ ದನಿಕುವರಂಗೆ ಜನನೀಜನಕರನವಧಿಕಹರ್ಷದಿಂದ ತಿಮಾನವಿಭವದಿಂ ಜಾತಕಮಂ ನೆಗಳು ಕಂಠೀರವನರಸರಾಜನೆಂದು ನಾಮಕರಣಮನಾಗಿಸಿದರಾಮಹೋತ್ಸವವನೇನೆಂಬಂ ||೭|| | ೪ | M