೧೪೨ dej ಮಹಿಶೂರ ಮಹಾರಾಜ ಚರಿತ್ರಂ - ದುಪೊಳ್ಳು ಗಾನಲೋಲನಾಗಿರೊಲಗದೊಳಾಯಕರಭಿನಂದನೀಯಮಪ್ಪ ಸಂಗೀತಮಂ ಕೇಳುತ್ತುಂ ಕಿರಿದುಪೊಳ್ಳು ಗಾನವಿದ್ಯಾ ವಿಚಕ್ಷಣ ತಾನು ತಾಳಲಯಸಾಯಿಗಳ ಲಕ್ಷಣಮನನುಸರಿಸಿ ಬೀಣೆಯಂ ಬಾಜೆಸುತ್ತು, ಮೃದುಮಧುರಕಂಠದಿಂ ಪಾಡುತ್ತುಂ ಕಿರಿದುಪೊಳ್ಳು ಸಾಗರಂ ತನ್ನ ಬರವ ನರಿದು ರಾಜಮಯ್ಯಾದೆಗೊಟ್ಟು ತೆರೆಗೆಯ್ದ ೪೦ ಮಾಸಿದ ಬಿಳಿ ದಪ್ಪ ನಡೆಮುಡಿ ಯೆನೆ ಕಣೋಳಿಸುವ ಬೆಳ್ಳಳಲ ಪಸರದಿಂದೆಯುಂ ಮಂಜುಳ ರಕುಸುಮ ಮಂಜರೀಪುಂಜವಿಹರನ್ಮಧುಕರಸಿಕರ ಝಂಕಾರದಿಂ ತೀವಿ ಸಾನ್ನಿಡಿದು ರಂ ಬೆಸುವಾರವೆಯ ಬಳ್ಳಿವುಂಡಪಂಗಳಿ೦ದೆಯುಂ ಚಟುಲಜಲನಿಧಿವೀಜೇನಿಚ ಯದಿಂ ಕೆದರ್ದ ತಂದುಳಂ ಪೊತ್ತು ಮೆಲ್ಲನೆಯಪ್ಪ ತಂಗಾಳಿಯಿಂ ದೆಯುಂ ಬಗೆಗೊಳ್ಳ ಕಡಲ ತಡಿಯೊಳಡೆಯಾಡುತ್ತುಂ ಕಿರಿದು ಪೊಳ್ಳಿನೆಲ ದೊಳಾಂಬಿಕ್ಷೆ ವಳಿಯರೆನಿಸಿದುದಕ್ಕೆ ನಿರವದ್ಯಭರತಗಾಂಧರ ವಿದ್ಯಾ ರಹಸ್ಯ ಕೂಲಂಕಷವನೀಪಾವಿಶೇ ಪನಪ್ಪ ಮಹಿಷಾಸುರಪುರಾಧೀಶಚಾಮರಾಜೇಂ ದ್ರನಿಂ ಮೆಚ್ಚಂ ಪಡೆಯದಿರ್ದೊಡೆಮಗೆ ಸೆಸರ್ವಾನಿಯಿಲ್ಲವೆಂದೂರಿ ೪೦ ಬರುತ್ತಿದ್ದ ನೆಗಳೆವಡೆದ ನರಕಿಯರ ಸಕಾಂಗಿಕೆಂಗಳಪ್ಪಳಿ ನಯಂಗಳಿ೦ದೆಯುಂ ಭಾವಪ್ರಕಾಶಕಂಗಳಪ್ಪನೇಕವಿಧಾನುಭಾವಂಗಳಿ೦ದೆ ಯುಂ ಸರಸಮಧುರಮಪ್ಪ ಸಂಗೀತದಿಂದೆಯುಂ ಸಭಾಸದರ ಚಿತ್ತಮಂ ಸೆರೆವಿಡಿವ ನೃತ್ಯಮಂ ನೋಡುತ್ತುಂ ಮನಮಂ ಬಿನದಂಗೊಳಿಸುತ್ತು ಮಲ್ಲಿ ಪ್ರ್ರ ಗಳ ||೧೯|| ಕಂ|| ಭಾರತಖಂಡದತೆಂಕಲ | ದಾರುಂಪೆಸರ್ವಡೆದ ನಚ್ಚಣಿಯರೊಲ್ಲು ಮನೋ || ಹಾರಿನಿಜನಾಟ್ಯ ವಿದ್ಯೆಯೊ | ೪ಾರಾಯನನೊಲಿಸಿಮೆಚ್ಚು ವಡೆಯದರಿಲ್ಲಂ ||೨೦|| ವ|| ಇಂತಲ್ಲಿ ಕೆಲವಾನುಂ ದಿನಮಿರಲ್ಲಿಂ ಫ್ರೆಂಚರಾಳ್ಮೆಯೊಳಿಪ್ಪ ಪಾಂಡುಚರಿಯೆಂಬ ಸಾಗರತೀರನಗರಕ್ಕೆ ತಳದಲ್ಲಿಯ ಮುಖ್ಯಾಧಿಕಾರಿಗ ಳುಂ ಪ್ರಮುಖ್ಯ ರುಂ ಗೆಯ್ದು ಸತ್ಕಾರಮಂ ಕಲ್ಗೊಂಡಲ್ಲಿಯುಂ ಕೆಲವಾ ನುಂ ದಿನಮಿರಾರೋಗ್ಯಶಾಲಿಯಾಗಿ ನಿರವಧಿಕಮನಸ್ಸನುಲ್ಲಾಸದಿಂ ಮೆರೆ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೫೭
ಗೋಚರ