ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ. ಕಂ || ನೆಲನಂ ಸುತ್ತುಂ ಸತ್ಯಂ | ಗುಲಾವರಿಸಿರ್ಪ್ಪ ಸಾಸಿರಡಿಯಂ ಸಾಸಿ || ರ್ದಿಯಂ ಸಾಸಿರ್ಗ್ಗಣ್ಣಂ | ಸಲುಗೆ ಪುರುಷಂ ಪುರಾಣನೆಮ್ಮವನಿಪನಂ ||೧|| ಕಂ || ಅಲ್ಲಿಂ ಮುಂದಾಧರಣೀ | ವಲ್ಲಭನೆಣೆಯಿಲ್ಲದರಸುತನದೇಳೆ ಯುಮಂ || ಸಲ್ಲಲಿತಗುಣಂಗಳುಮಂ || ಸೊಲ್ಲಿಸಲರಿದೇರುತಿರ್ದ್ದ ನೃಪತೇಜಮುಮಂ ||೨|| ಕಂ || ವೆಚ್ಚದರಿಲ್ಲವನಿಯೊಳಾ | ಸಚ್ಚರಿತನ ರಾಜ್ಯಭಾರಮಂ ನಡೆಯಂ ಕೇ || ಆಚ್ಚರಿಗೊಳ್ಳದರಿಲ್ಲಂ || ನಿಚ್ಚಂ ಗುಣಗಣಮನೊಲ್ಲು ಪೊಗಳದರಿಲ್ಲಂ ||೩|| ಮತ್ತ೦, ಕಂ || ಆನರಸಂ ಸ್ವರಭೇದ || ಜ್ಞಾನಂ ಮಿಗೆ ರಾಗಮನಿತುಮಂ ಮೃದು ಕಂಠ || ಸ್ಯಾನದೊಳಾಲಾಪಿಸುತುಂ | ಗಾನಕಲಾನಿಪುಣನೆಂದು ಹೆಸರ್ವಡೆದಿದ್ದ ೯೦ ||೪|| ಮತ್ಯಂ, ವೃ|| ವಿಳಸದ್ಯಾಮವಿಶೇಷಮರ್ಥನೆಗಳಂದಂದಾಳೆ ತಾಳಕ್ರಮಂ | ಕೆಳೆಗೊಂಡಿರ್ಪ್ಪಿನಮುಣೆ ರಾಗರಸಭಾವಂ ಕಾಲಭೇದಂ ಮನಂ || ಗೊಳೆ ತಂತ್ರೀಶ್ರುತಿಯುಂ ಗಳಸ್ವನಮುಮಂತೊಂದಾಗೆ ಮಾಡುತ್ತೆ ವು || ವ್ಯಳಸಂಗೀತ ಕಲಾಧುರಿ ಣನೆನಿಸಿದ್ದಂ ತನ್ಮಜೀವಲ್ಲಭಂ ||೫||