ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಮಹಿಶೂರ ಮಹಾರಾಜ ಚರಿತ್ರಂ ಮತ್ತಂ, ಕಂ || ಆವಗಮುಂ ಶ್ರೀಮತ್ | ಪ್ಲಾವನಿಪನುದಾರಬಾಹುದಂಡದೆ ಸುಖದಿಂ || ದಾವಾಸಿಸುತಿರ್ಪ್ಪ ಮಹೀ | ದೇವಿಗೆ ನೆನೆಪಿನಿಸುಮಿಲ್ಲನಂತಾಹಿಪನಾ ||೬೫|| ಮತ್ತಂ, ಕಂ || ಪರಿಚಿಂತಿಸಿ ಮಂತ್ರಿಗಳೊ || ಊರಿಚಿಂತಿಸಿ ತಾನುಮರಸುಗೆಯ್ಯುತ್ತಿರಲಾ || ನರಪಾಲಂ ಪ್ರಕೃತಿಗಳೆ | ಇರುಮತಿಸುಖದಿಂ ಸ್ವಧರರತರಾಗಿರ್ಪರ್ ||೬೬|| ಎನುತಶರತ್ಕಾಲಂ ಸ | ಜನಹಂಸಕುಲಕ್ಕೆ ಸಿಕ್ಕು ಮೇನೆಂದಪೆನಾ | ಜನಪಾಲಪುಂಗವಂ ದು || ಜನಸರ್ಪ್ಪಕುಲಕ್ಕೆ ಗರುಡಪಜ್ಜೆಯನಿಕ್ಕುಂ ||೭|| ಜೋರಭಯಂ ವೈರಿಭಯಂ | ದಾರಿದ್ರಭಯಂ ಶರಾರುಭಯಮೀತಿಭಯಂ || ಸಾರಮತಿಶಾಲಿ ಕೃಷ್ಣ ಮ || ಹೀರಮಣನ ರಾಜ್ಯದಲ್ಲಿ ತೋರಿದುದಿಲ್ಲಂ ||೬೮|| ಜನರಾನಾಡೊಳ್ಳರಹಿಂ || ಸನವಿಲ್ಲದೆ ತಮ್ಮ ತಮ್ಮ ಧಮ್ಮದೊಳರಾ || ರ್ಜನಮಂ ಗೆಯ್ಯುತೆ ಸುಖಜೀ | ವನಮೆಸಗುವರಾತನಾಳೆಯೇನೊಪ್ಪುಗುಮೋ ||೯|| ಅರಸನವಂ ಪ್ರಜೆಗಳನೆ | ಲ್ಲ ರುಮಂ ಬೇಳಂಬವಿಲ್ಲದಂತೊಲವಿಂದಂ || ಪರಿಪಾಲಿಸುತಿರಲಾಧರೆ | ಸುರಧೇನುವೊಲೆಳಸಿದರ್ಥಮಂ ನೆರೆ ಕರೆಗುಂ ||೭೦||