ದ್ವಾದಶಾತ್ಮಾನಂ. || ಕಂ || ಆವತೆರನಪ್ಪ ರೂಪಿಂ | ಭಾವಿಪರಾರನ್ನ ನವರನಾಕಾಂಕ್ಷಿತವಿ || ತಾವಿಧದ ರೂಪಿನೋವುವ || ದೇವಂ ಚಿನ್ನೂರಿ ಸಲಪುಗೆಮ್ಮಯ ನೃಪನಂ ||೧|| ನಿಜವಂಶಖ್ಯಾತನಹೀ | ಭುಜರಂ ನಿಜಸದ್ಗುಣಂಗಳಿ೦ ನೆನೆಯಿಸುತುಂ || ಸುಜನಾಗ್ರಣಿ ಕೃಷ್ಣನೃಪಂ | ಪ್ರಜೆಗಳನಾಬಳಿಕೆ ಸೊಗದೊಳೊವರಂ ||೨|| ವ|| ಆಗಳ್ಳಹಾಮಾತ್ಯನೆನಿಸಿದ ಮಾಧವರಾಯಂ ಸ್ವಾಯತ್ತ ಸಿದ್ದಿ ಯಪ್ಪ ಮಾರಾಯನ ಶಾಸನಮನಿನಿಸಾನುಂ ಮೀರದೆ ರಾಜಕೀಯಕಾರಂಗಳ ನತಿಪ್ರಬುದ್ಧವಾಗಿ ನಡೆಯಿಸುತ್ತಿಪ್ಪತ್ರೆಗೆ ಕೇವಾನುಂ ದಿನದೊಳ್ಳುಂ ಮಾರಾಣಿಯಾಂವಿಸಿರಂತರಮನೆಯನಧಿಕಾರಿಜನಂ ಹಲವು ಬಣ್ಣದ ಕಲ್ಲ ೪ಂದು ಕುಶಲರಪ್ಪ ಶಿಲ್ಪಿಗಳಿ೦ ಪೊಚ್ಚ ಪೊಸತಾಗೆ ನಿರಾಣಂಗೆಯಿಸಿಡಂ|| ಕಂ || ಧರೆಯೊಳಡಗಿದ್ದು ಕರಾ || ಟರಸೇಂದ್ರರ ಪುಣ್ಯವಶದೆ ಪೊರವಂದ ಮಹಾ || ಹರಿಪೀಠದಂತಿರೆ ಯುಧಿ | ಷ್ಠಿರನರಮನೆಯುಮೊಗೆತಂದುದೆನಲದು ತೋರುಂ ||೪|| ವೈ| ಮರದೊಳಮಂತು ಲೋಹದೊಳಮಿಂತಸಗqರಿದೆಂದೆನಿ ಕಂ | ಡರಸಿದನೇಕರೂಪದುಪಲಂಗಳ ಸಂಕುಲದಿಂದೆ ಗೆಯ್ಯು ಚಿ || ಇರಿಸಿದ ಭಿತ್ತಿ ಬಾಗಿಲಮಳಂಬದ ಹಂತಿ ಗವಾಕ್ಷಮು | ಸ್ಪರಿಗೆಯಗುಮ್ಮಟಂ ಮೆರೆಗುಮೇಂಕಡುಜಾಣರೊ ಶಿಲ್ಪಿಗಳ್ ||೫|| - ವ|| ಮತ್ತಂ ತರವೇರಿದೇಳುಂ ಮೇಲುಪ್ಪರಿಗೆಗಳಿಂದೆಸೆವಾಪೊಸತಪ್ಪರ ಮನೆಯೊಳಲ್ಲಲ್ಲಿ ಸರಸ್ವತೀಭಂಡಾರಮಾಯುಧಶಾಲೆ ಮೊದಲಪ್ಪ ಸುತ್ತಣ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೩೧
ಗೋಚರ