ಮಹಿಶೂರ ಮಹರಾಜ ಚರಿತ್ರ ಕಂ|| ಬಂದುದು ವಸಂತಸಮಯಂ | ಬಂದುದು ಮನ್ಮಥನ ಕರಕೆ ಪುಷ್ಪಶರಾಸಂ || ಬಂದುದು ಬನಸಿರಿಗೈಸಿರಿ | ಬಂದುದು ಪಥಿಕರೆ ವಿರಹಶಿಖಿಸಂತಾಪಂ ||೩೧|| ಆಗಳ್, ಕೋಗಿಲೆಗಳೊರಿದುವಾ | ಕೋಗಿಸಿ ಮಾವುಗಳ ಚೆಂದಳಿರನಿಂಚರಮಂ || ಪೂಗೊಂಚಲ ತನಿವಂಡಂ | ರಾಗದೆ ಪೀಳಿಗಳೆಸಗಿದುವು ಝಂಕೃತಿಯಂ || ೩.೨|| ಮತ್ತು ಕೆರೆಗಳಣ್ಣಂಪಿನ ಪರಿ | ಪರಿಯಹ ನೀರೂಗಳಿಂದಮಂಕುರಿಸಿದ ತಾ || ವರೆಗಾವನಾಹರಿಸಿ ನಲಿ | ವರಸಂಚೆಗಳಿಂದಮಾಗಳೇನೊಪ್ಪಿದುವೋ ||೩೩|| ವ|| ಮತ್ತಮಾಗಳಲ್ಲೆಲ್ಲಿಯುಂ ಬನಬನಮುಮೊಳಂಪನಾಳ್ಮಲ್ಲಿ ಗೆಯ ನರುಗಂಪನಾಳರುವ೦ತಿಯ ಕಡುಗಂಪನಾಳ ದಿರ್ಗoತಿಯ ಮೆಲ್ಲ ೦ ಪನಾಗೋರಟೆಯ ಬಲ್ಲ ೦ಪನಾಳೆ ಸಂಪಗೆಯ ತನಿಗಂಪನಾಳ್‌ಸುರಗಿಯ ತೆಳ್ಳಂಪನಾಳ್ ಸುಗೆಯ ನಿಡುಗಂಪನಾಳ ಪಾದರಿಯ ಪೂಗಳಿ೦ತೀವಿ ಕಮ್ಮ ಗಣೆಯನ ಕೈದುಸಾಲೆಯೆಂಬಂತೆ ಕಳಿಸುತ್ತಿರ್ಪಿನಂ ||೩೪| ಕಂ|| ದರವಿದಳಿತನಾನಾಸುಮ | ಪರಿಮಳಭರವಾಂತು ಮಂದಮಂದಸ್ಸಂದಂ || ಚರಿಸುತಿರೆ ಮಲಯಪವನಂ | ಪರಿಮಳದ ಕರಂಡಕಂಬೊಲಾಯ್ತಾಭುವನಂ ||೩೫|| ಮತ್ತ೦, ಗಿಳಿಗಳ್ಳರಿಣತದಾಡಿಮ | ಫಳಬೀಜಂಗಳಮಧುರರಸಮಂ ಪೀರ || ಗಳಿಸಿದ ಮದದಿಂದೇಂಕ | ಸ್ಕೊ ಳಿಸಿದುವೋ ತೊಂಡುಗೆಡೆಯುತುಂ ಬನಬನದೊಳ್ ||4||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೭೯
ಗೋಚರ