ಚತುರಾಶ್ವಾಸಂ L8 ವ|| ಅಂತು ವಸಂತೋದಯವಾಗಲಾಮೇದಿನೀಕಾಂತನಂತಪುರ ಸೀಮಂತಿನಿಯರ್ವರಸು ಲೋಕರಂಜನಮೆಂಬ ಕೇಳೀವನದೊಳನವಿಹಾರ ಕಳಸುವುದುಮಾನೃಪಾಂಗನೆಯರೊಡನೊಡನೆ ಕಡುರಾಗದಿಂ ನಿಂಗರಂಗಂ ಡು ತಮ್ಮನ್ನ ರಾಣಿವಾಸದ ಪೊಂದೇರ್ಗಳನಡರಿ ಸಡಗರಿಸಿ ರಾಜವಾಹನ ನೇರಿ ||೩೭|| ಕಂ|| ಶ್ರೀಕೃಷ್ಣನೃಪಂ ನಿಜರಮ | ಕುಲದೊಡಗೂಡಿ ಕೇಳಿವನಕೊಲವಿಂದಂ || ಶ್ರೀಕೃಷ್ಣಂ ಗೋಪಸ್ತ್ರೀ | ಲೋಕಂಬೆರಸಂದು ಬಂದತೆರದಿಂ ಬಂದಂ ||೩೮|| ವ|| ಅಂತು ಬಂದೆ ಮುಂ ತಣ್ಮುವತ್ತಾ ಪೂಂಟಮಂ ಬಳ ಸುವಾಗಳ್ಳಂಬಲದೊಳಿರ್ಪರನಿಯರಂ ನೋಡಿ ||೩|| ಕಂ || ಪಲವಂ ಬಣ್ಣದೆ ಕಣೋಳಿ | ಪಲರ್ದಲರ್ಗಳನಾಂತು ನೋಡಲೀಬನಸಿರಿಯುಂ || ಪಲವು ಮಣಿಭೂಷಣಂಗಳಿ | ನಲಂಕೃತೆಯರಾದ ನಿಮ್ಮ ವೋಲ್ಗೊಗಯಿಸುಗುಂ ||೪೦|| ವ|| ಎಂಬುದುವಾಬನದ ಸೊಬಗು ಕಟ್ಟೆ ರಕದಿಂದೆಲ್ಲ ರುಂ ನಿಟ್ಟ ಸುತ್ತಿ ರ್ಪವಸರದೊಳೂರ ಸರಸವತಿಯರಸನಂ ನಿರುಕಿಸಿ ಬಳಸಂದು ||8|| ಕಂ || ಅರಲಾಂತೆಸೆವೀಮಲ್ಲಿಗೆ || ಯರಸ ಕವಲೆರಡು ಬಳ್ಳಿಗಳಿನಿಂತೀಮಾ || ಮರನಂ ಬಿಗಿದಪ್ಪಿದುದೆಂ | ದೆರಡುಂ ನಳಿತೋwಳಿಂದಮಪ್ಪಿದಳೊಲವಿ೦ ||೪೨|| ವ|| ಅಂತಾಲಿಂಗಿಸಿದ ಲತಾಂಗಿಯ ಮಲ್ಪುವೆತ್ತ ಸಂಮಯ್ಯ ಸೋಂ ಕಿಗೆ ಮಯ್ಯರದು ಪೊಂಪುಳವೋದ ವಾರಾಯನ ಕಯ್ಯಾವರೆಯಂ ಪಿಡಿದು ಮತ್ತೊರ್ವ ಮತ್ತ ಕಾಶಿನಿ ||೩|| ಕಂ || ಮಾರಾಯನೆ ಬಿಜಯಂಗೆ | ಯೌರಭವಷ್ಟುಷ್ಪಗುಚ್ಛವಿಹರನ್ಮದಳ್ಳಂ ||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೮೦
ಗೋಚರ