ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರಾಶ್ವಾಸಂ ಗರುಣನಯನಾಂತರುಚಿಬಂ | ಧುರತರಮಂ ಸೂಸಿದಳ್ಳ ಟಾಕ್ಕೋರಮಂ ||೬೧|| ಕಂ || ಅರಸನದಂ ಕಂಡೆಳನಗೆ | ವೆರಸೆಲ್ಲ ರೊಳಂ ಸಮಾನವಿಲವಿಂದಂ || ಸರಸಪರಿಹಾಸಮೆಸರು | ತೆರಡುಂಕಯ್ಯ ಳಿನಿದಿರ್ಚಿ ನೀರಂತಿಳಿದಂ |೬೨|| ವೃ || ಬಾರಿಸಲಾರದೊರ್ವರಸಿ ತಜ್ಜಲಶೀಕರಘಾತಮಂ ಮುಖಾಂ | ಭೋರುಹಮಂ ಮಗುಳಿ ನಸು ಕೊಂಕಿ ದಪಾಂಗದೆ ಮೆಚ್ಚಿ ನೋಡಿದ || ರನನೊರ್ವಬಾಲೆ ತಲೆವಾಗಿ ಕರಂಗಳನೊಡ್ಡಿ ಲೀಲೆಯಿಂ | ಭೋರನೆ ಸಾರ್ದು ಕಳೆರಡಂ ಪಿಡಿದಳಗೆಗೂಡಿ ರಾಯನಾ ||೬೩|| ವ|| ಆಸಮಯದೊಳ್, ವೃ || ಮಣಿಮಯಕಂಕಣಂಗಳುಲಿದಾಡೆ ನೃಪಾಂಗನೆಯರ್ಕಳೊರುಂ || ಕ್ಷಣರುಚಿಯಂದದಿಂದೆ ಸಿರಿಮೆಯ್ಯೋಲೆದಾಡೆ ಮನೋಜ್ಞ ರತ್ನ ಭೂ || ಷಣಕಿರಣಂಗಳಿ೦ ಸರಸಚಾಪಮನಾಗಿಸುತೊಟ್ಟು ಕಚ್ಚಳಿ೦ || ದಣಿಯರನಂಬುವಂ ನೆರೆ ನಗುತ್ತವನೀಂದ್ರನ ಮೇಗೆ ಸೂಸಿದರ್ ||೪|| ವ|| ಇಂತಾನೃಪಕಾಂತಾಜನಂ ನೀರಾಟಮನಾಡಿ ನೆರೆ ಬಳಲು ತಟ ಗತವಾದ ವಿಚಿತ್ರತರಲೀಲಾಭವನಮಂ ಸಾರ್ದು ನಾಂದು ಮೆಯ್ಕೆ ಪಟ್ಟಿ ರ್ದುಡಿಗೆಯಂ ತೆಗೆದು ನಿರಿವಿಡಿದಿಟ್ಟಿರ್ದ ಬೆಲೆಯೇರಿದ ಪಟ್ಟಣಿಗೆಯನುಟ್ಟನು ಪದಮೆ ಪರಿಜನಂ ಮಂಡೆಯನಾರಿಸಿ ಯಾವನರೂಪದಿಂ ಹಸನಾದ ಪೊಸಗಂ ಪನೇರಿಸಿ ಪರಿವಡೆದ ತುದಿಜಡೆಯಂ ಪೆಣೆವುದುಂ ಬಳ್ಳಡುಗೆ ಮುತ್ತಿನುಡೆನೂ ಲನಳವಡಿಸಿ ಸಡಿಲ ಮಣಿಭೂಷಣಂಗಳ೦ ಸಾವಗಿಸಿ ಮನವೊಪ್ಪಿದಂತೆ ಪರ ವಣೆಗೆ ಕುಂಕುಮದ ಬೊಟ್ಟನಂದಂಗೊಳಿಸಿ ನುಣ್ಣೂರಲ್ಲಿ ನಿರತಿಶಯಪರಿ ಮಳಾನುಬಂಧಮಂ ಗಂಧಮಂ ತಿಗುರಿ ಸೋರುಡಿಗೆ ಕಮ್ಮರಂ ಸೂಡಿ ನಿಂಗರಂಗೊಳೆ ತಾನುಯಾಯಿಳೆಯಾಂ ತೀರಮಂ ಸಾರ್ದು ಮಡಿಯು ಟ್ಟು ತಿಕಾದಿಗಳಿಂದಲಂಕೃತಶರೀರನಾಗುವುದುಮೆಲ್ಲರುಂ ಸರಸಸಲ್ಲಾಪಂ ಗೆಯ್ಯುತ್ತ ಸರತರಾಭ್ಯವಹಾರತಾಂಬೂಲಂಗಳಂ ಪರಿಗ್ರಹಿಸಿ ಸಮಗ್ರ ಮೋದದಿಂ ತನ್ನಮ್ಮ ನೆಲೆವಾಡಮನೆಯ್ದ ಲಲ್ಲಿಂಬಳಿಯಂ |೬೫||