40 ಮಹಿಶೂರ ಮಹಾರಾಜ ಚರಿತ್ರಂ ವೃ || ಪರಿಚಯವಿಲ್ಲದಿರ್ದೊಡಮಣಂ ಭಯವಿಲ್ಲದೆ ತಮ್ಮೊಳೊ ಯಂ | ಪರಿಚಿತರಲ್ಲಿ ತೋರ್ಪ್ಪತರದಿಂದ ಮೆ ತೋರುತೆ ಧೀರಭಾವದಿಂ || ನರಪತಿಸೂನುಗೌರವಕೆ ತಕ್ಕುದಿದಿಂತೆನಲಾಕ ಮಾರನು || ಚರಿಸುವ ಶೈಶವೋಕ್ತಿಗಳನಾಲಿಸಿ ಹೂಣಜನಂಗಳದೇಂಮುದವಾಂತರೋ || ವ|| ಮತ್ತಂ, ಕಂ || ಧೈರ್ಯಮುಮನೆಳಮೆಯೊಳೆ ಗಾಂ | ಭೀರ ಮುಮಂ ರಾಜಯೋಗ್ಯಕಾರಮುಮಂ ಚಾ || ತುರಮುಮಂ ಕಂಡತ್ಯಾ | ಶ್ವರಮನಾಂಥೇಯರಾಂತರೀನೃಪಸುತನಾ ||೧೫|| ವ|| ಮತ್ತಂ , ಕಂ || ಮನಮೊಪ್ಪಿದಂದದಿಂ ನಂ | ದನನು ಸಿಂಗರಿಸುತುಡಿಗೆತುಡಿಗೆಗಳಿಡುತಾ || ಜನಪನ ರಾಣಿಯರಾದಂ | ನನೆಕೊನೆವೋಗುತ್ತೆ ನೋಡಿ ತಣಿಯರದೆಂದುಂ ||೧೬|| ವು! ಇಂತು ಬಾಲಲೀಲೆಯಿಂದೆಲ್ಲ ರಂ ಸಂತಸಂಗೊಳಿಸುತ್ತನು ಮದಿಂ ಪಂಡಿವದೆಳನೆರೆಯಂತೆ ಬಳೆಯುತ್ತಿದಕುಮಾರಂಗಯ್ದನೆಯ ಬರಿ ಸದೊಳಾಯಿಳಾಧಿಸಂ ಬಾಲಶಿಕ್ಷಾ ವಿಚಕ್ಷಣರುಪಾಧ್ಯಾಯರಿಂದಕ್ಷರಾ ಬ್ಯಾಸಂಗೆಯಿಸುವುದುಂ ||೧೭|| ಕಂ || ಬಳಿ ಸಂದೊಡಮೆಯ ರೂಪಂ || ಪಳು ಕೊಳಕೊಳ್ವಂತನುಕ್ರಮದಿನಾಚಾರಂ || ತಿಳಿಸಿದ ವರ್ಣಾಳಿಯನಾ | ಯೆಳೆಯಂತಾಂ ಗ್ರಹಿಸುತಿರ್ದನೇಂಪಟುಮತಿಯೋ ||೧೮|| ಕಂ | ಗುರು ಕಲಿಸಿದಂದದಿಂದಾ | ದರದಿಂ ಮೃದುಮಧುರಕಂಠದಿಂ ನಂದನನು || ಚ್ಚರಿಸುವ ಸಂಖ್ಯಾಳಿಗಮ || ಕ್ಷರತತಿಗಂ ನೃಪತಿ ಮೆಚ್ಚಿ ನನೆಕೊನೆವೋದಂ ||೧೯||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೯೫
ಗೋಚರ