ಪಂಚಮಾಶ್ವಾಸಂ ೮೧ - ವ ಇಂತು ವಿದ್ಯೆಯೊಳ್ ರವದ್ಯ ಬುದ್ಧಿಶಕ್ತಿಯುಕ್ತನಪ್ಪಾ ಪಟ್ಟ ಗುವ ರನಂ ಕಟ್ಟಳ್ಳರಿಂ ನಿಟ್ಟಿ ಸುತ್ತೆ ಕೃಷ್ಣರಾಜನೀಯುವರಾಜಂ ವರ್ಧಿಷ್ಟು ತಾನಿ ವನಳಮೆಯೊಳ ನಿರುಪಾಧಿಕಮಪ್ಪಾ೦ಗ್ಲೀಯರ ನೇಹಕ್ಕೆಡೆಯಾಗಿ ರ್ಪದರಿಂ ದವರೊಡವೆರೆದು ಮುಂದೆ ಸುಖಸಾಮ್ರಾಜ್ಯ ಪದವಿಯನನುಭವಿಸಿ ತಕ್ಕಂ ತಾಂಗೇಯಭಾಷೆಯೊಳುಮಿವನಂ ಪ್ರವೀಣನಂ ಮಾಡಲೆಬೇಳ್ಳುಮೆಂದಾ ಲೋಚಿಸುತ್ತಿ ರ್ಪಿನಂ ದುರ್ನಿವಾರವಪ್ಪನಾರೋಗ್ಯದಿಂ ಶರೀರವುಳಿಯಲಾ ರದೆಂದು ತರಿಸಂದಾಕುವರನಂ ಬರಿಸಿ ನಿಜಹಸ್ತದಿಂದಧಿಕಾರಮುದ್ರೆವೆರಸು ಪಟ್ಟಗಳ್ಳಿಯನಾತಂಗಿತ್ತು ರುಜ್ಯ ಭಾರವ್ರತಮನುಪದೇಶಿಸಿ ಪರಸಿ ||೨೦|| ಕಂ || ಧರಣೀತಂಭೋಗದೆ ತಣಿ | ದರಸನವಂ ದಿವ್ಯಸೌಖ್ಯಕೆ ಭಸಿದನೆಂಒ೦ || ತಿರೆ ಎಭವನಾಮಸಂವ ! ತೃರದೊಳ್ಳಿ ಜಪುಣ್ಯದಿಂದ ಬರ್ದಿಲಮನಡರ್ದ೦ ||೨೧|| ಕಂ || ಉದಯಿಸಿದಸಿಳೆಯೊಳಾನಂ | ದದೊಳೀಭೂಮಿಪತಿವೊಂದಿದಂ ಭವದೊಳೆಂ || ಬುದು ವಿಧವಾನಂದಂಗಳ | ತದಧೀನಂಗಳ ಡೆಂದು ಸೂಚಿಸುತಿರ್ಕು೦ ||೨೨|| ಕಂ || ಅರಸಂ ಸಲೆ ಸಗ್ಗ ಕ ಗಜ | ತುರಗಂಗಳುಮಂದು ಮೇವುಳಿದು ಕಣ್ಣೀರಂ || ಸುರಿಯಿಸಿದುವೆಂದೆನಲ್ಲಾ | ಪರದೇಶಜನಂಗಳಳಲನೆನಿತೆಂದೊರೆವೆಂ ||೨೩|| ವು ಅಂತರಸಂ ಸಲ್ಪು ದುಮಾಶ್ರಿತತ್ರಾಣಧುರೀಣರಪಾ೦ಗ್ಲೀಯರು ಕ್ಷಣಮ ಪತಿಶೋಕಾನಂದಮಾನಮಾನಸಯರಪ್ಪ ಮಾರಾಣಿಯರಂ ಸಂ ತವಿಟ್ಟಭಯಪ್ರದಾನಂಗೆಯು ರಾಜ್ಯಾಧಿಕಾರಧುರಂಧರವಯಸ್ಕನಾಗುವು ದುಂ ಯುವರಾಜನಪ್ಪಚಾಮರಾಸಂಗಿ-ರಾಜ್ಯಮನೊಪ್ಪಿಸುವೆವೆಂದುಮುನ್ನೆವ ರಂ ಮುನ್ನಿರ್ದ ಕಟ್ಟಳೆಯೆಂತಂತು ನಡೆಯಿಸಿಕೊಂಡುಬರ್ಪ್ಪೆವೆಂದುಮಲ್ಲ ಪಟ್ಟಿಂಗಳೊಳಂ ತಲೆವಳ್ಳಿಗಳೊಳಂ ಕಾಲೂರ್ಗಳೊಳಂ ಡಂಗುರಮಂ 11
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೯೬
ಗೋಚರ