ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮೩ ಮಾಡಿದ್ದುಣೋ ಮಹಾರಾಯ, ಗಾಲೀಕೆಳಕ್ಕೆ ಒಪ್ಪಿಸಲ್ಪಟ್ಟ ಶಿಶುವನ್ನು ಲೇಶವೂ ಕುಂದಕವಿಲ್ಲದಂತೆ ಕಾವಾಡಿದವರು ಯಾರು ? ಅತ್ಯಂತ ವೈದ್ಯರಾದ ಮಹರ್ಷಿಗಳು ಯಾವಾಗಲೂ ಎಡೆಬಿಡದೆ ಭಗವಂತನ ಸಮಾಸದಲ್ಲಿಯೇ ಇರುತ್ತಾರೆ. ಆ ತಪಸ್ಸಿ ಗಳ ಮನಸ್ಸೆಲ್ಲಾ ನಾ ಮಿಯಲ್ಲಿಯೇ ಲೀನವಾಗಿರುವ ಕಾರಣ ಭಕ್ತ ಪರಾಧೀನನೆಂಬ ಬಿರುದು ಪರಮಾತ್ಮ ನಿಗೆ ಮೊದಲಿನಿಂದಲೂ ಬಂದಿದ. ಬಡವರಮೇಲಂತೂ ಅವನ ಕಟಾಕ್ಷ ಸಂಪೂರ್ಣವಾಗಿ ರುವ ಅಂಶವನ್ನು ಹೇಳಬೇಕಾದ್ರೆ ಇಲ್ಲ. ಸುಧಾಳು ನನ್ನು ಸ್ವಾಮಿ ಹೇಗೆ ಉಪಚರಿಸಿದನೋ ಅವನ ಬಡ ತನವು ಹೇಗೆ ನೀಸಿತೋ ಅದೆಲ್ಲವನ್ನೂ ನೀವೇ ಬಲ್ಲಿರಿ. ಶ್ರೀಕೃಷ್ಣನು ಸಂಧಿಮಾಡುವುದಕ್ಕಾಗಿ ಹಸ್ತಿನಾವತಿಗೆ ಹೋದಾಗ ಅನೇಕ ಚಕ್ರಾಧಿಪತಿಗಳು ಭಗವಂತನನ್ನು ಎದುರುಗೊಂಡು ಕರೆದುಕೊಂಡು ಹೋಗಿ ಸತ್ಕಾರಮಾ ಡಲು ಸಿದ್ಧರಾಗಿ ಕಾದುಕೊಂಡಿದ್ದಾಗ ಅವರೆಲ್ಲರ ನ್ನೂ ಬಿಟ್ಟು ನಿನಗೆ ಕೊಡಲು ನನಗೆ ಏನೂ ಗತಿ ಇಲ್ಲವಲ್ಲಾ ಸ್ವಾಮಿಾ, ಎಂದು ಪೇಚಾಡುತಾ ಇದ್ದ ವಿದುರನ ಮನೆಗೆ ಹೋಗಿ, ಅಲ್ಲಿ ಅವನು ತನ್ನ ಅಂ ಗೈಗೆ ಹಾಕಿದ ಒಂದು ತೊಟ್ಟು ಹಾಲನ್ನು ನೆಕ್ಕಿ ಅವನ ಮನೆಬಾಗಿಲಲ್ಲಿ ಹಾಲಿನ ಕೋಡಿಯನ್ನು ಹರಿಸಿದ ಆ ಭಕ್ತ ಪರಾಧೀನ ಮೂರ್ತಿಗೆ ತನ್ನ ಭಕ್ತರನ್ನು ಕಾಪಾ ಡುವುದರಲ್ಲಿ ಇನ್ನು ಎಷ್ಟು ಅಕ್ಕರೆಯೋ ನಾನುಅರಿಯೆ.