ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭ ಮಾಡಿದ್ದು ಣೋ ಮಹಾರಾಯ, ನಾರ-ಏನೋ ಆ ಪುರಾಣಗಳೆಲ್ಲಾ ನನಗೆ ಏಕೆ ? ತಾವು ದೊಡ್ಡ ಪಂಡಿತರು. ತಾವು ಹೇಳಿದ ಸಂಗತಿಗಳೆಲ್ಲ ನನ್ನೂ ಕೇಳಿದಮೇಲೆ ನನಗೆ ಈಗ ಜ್ಞಾನೋದಯವಾಗು ತಾ ಇದೆ. ಇನ್ನು ಆಡಿಕೊಂಡು ಪ್ರಯೋಜನವೇನು? ದೀಕ್ಷಿ-ಇನ್ನೊಂದು ಮಾತನ್ನು ಹೇಳುತ್ತೇನೆ ಕೇಳಿ. ಒಂದೊಂ ದುವೇಳೆ ಬಾಲಕರನ್ನು ಶಿಕ್ಷಿಸಬೇಕಾದ ಸಂದರ್ಭ ಬರು ವುದು. ಆಗ ದೇಹಕ್ಕೆ ನಾನಾವಿಧವಾಗಿ ಹಿಂಸೆಯುಂ ಟಾಗುವಂತೆ ಮಾಡಿದರೆ ಶಿಕ್ಷೆ, ಬೇರೆ ಇನ್ನು ಯಾ ವದೂ ಶಿಕ್ಷೆಯಲ್ಲವೆಂದು ತಿಳಿಯಬಾರದು. ಮಕ್ಕ ಳನ್ನು ಪ್ರೀತಿಯಿಂದಲೇ ಕಾಣು ತಾ ಅವರಿಂದ ಆಗ ಬೇಕಾದ ಕೆಲಸವನ್ನು ಮಾಡಿಸಬೇಕು. ಅವರು ತಪ್ಪು ಮಾಡಿದಾಗ ನಾವು ತೋರಿಸತಕ್ಕೆ ಪ್ರೀತಿಯಲ್ಲಿ ಸ್ವಲ್ಪ ಕಡಿಮೆ ಮಾಡಿದರೆ ಅಷ್ಟೇ ಸಾಕು. ಒಂದಕ್ಕೆ ಹತ್ತರಷ್ಟು ದಂಡನೆಯಾದಂತೆ ಬಾಲಕರು ಭಾವಿಸುವರು. ಹೀಗೆ ಮಾತನಾಡಿಕೊಂಡು ದೀಕ್ಷಿತನೂ ನಾರಪ್ಪ ಯ್ಯನೂ ತನ್ನ ಸಂಧ್ಯಾವಂದನೆಯನ್ನು ಹೊಳೆಯಲ್ಲಿ ತೀರಿಸಿಕೊಂಡು ಮನೆಗೆ ಒಂದರು. ದೀಕ್ಷಿತನು ಆಡಿದ ಮಾತು ನಾರಪ್ಪಯ್ಯನ ಮನಸ್ಸಿನಲ್ಲಿ ಚೆನ್ನಾಗಿ ಅಂಟಿತು. ಆ ವಿಷಯವನ್ನೆ ಹಿಂದೂ ಮುಂದೂ ಯೋಚಿಸುತಾ ಹಿಂತಿರುಗಿ ಮನೆಗೆ ಬರುವಾಗ ಯಾವ ಮಾತನ್ನೂ ಆಡದೆ ಅದುವರೆಗೂ ಮಾನವಾಗಿಯೇ ಇದ್ದ ದೀಕ್ಷಿತ ನಃ ಪುನಃ ಉಪಾಧ್ಯಾಯನನ್ನು ಕುರಿತು,