ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೯ ಮಾಡಿದ್ದುಣೋ ಮಹರಾಯ. ಲೋಪಬಂದರೆ ಕೋಪಬರುವುದು ಸಹಜವಾಗಿದೆ. ಆದ್ದರಿಂದ ಅದೇ ತೋಳು ಅಂಟಿಕೊಂಡು ನಾರಪ್ಪಯ್ಯನ ಮನಸ್ಸನ್ನು ಕೆಡಿಸಿತು. ತನಗೆ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ದೀಕ್ಷಿತನು ಹೀಗೆಲ್ಲಾ ಆಡಿದನೆಂಬದಾಗಿ ಉವಾದ್ರಿಯು ತಿಳಿ ದುಕೊಂಡು ಮನಸ್ಸಿನಲ್ಲಿ ಕಲ್ಕ ಷವನ್ನು ಇರಿಸಿಕೊಂಡನು. ಈ ಮಧ್ಯೆ ಹುಡುಗರು ಯಾರೂ ಬಾರದೇ ಮರಒಡೆದು ಹೋದಮೇಲೆ ನಾರಪ್ಪಯ್ಯನು ಯಾತನೆಯನ್ನು ಅನುಭವಿ ಸುತಾ ೫-೬ ತಿಂಗಳು ಬಿದ್ದಿದ ನು; ತರುವಾಯ ಗುಣವಾಗಿ ಮೈ ಗಾಯವೆಲ್ಲಾ ವಾಸಿಯಾದಮೇಲೆ, ಹೊತ್ತುಗೊತ್ತಿಗೆ ದೀಕ್ಷೆ ತರ ಮನೆಯಲ್ಲಿ ಸಣ್ಣಕ್ಕಿ ಅನ್ನ ಬೆಣ್ಣೆಕಾಸಿದ ತುಪ್ಪವನ್ನು ಉಂಡುಂಡು ಮಾಡುವುದಕ್ಕೆ ಕೆಲಸವಿಲ್ಲದೆ ಹಗಲು ಸಾಯಂ ಕಾಲ ಕೊಲ್ಲಾಪುರದ ಅನ್ನು ನಗುಡಿಯಲ್ಲಿ ಕೂತುಕೊಳ್ಳುತಾ, ಸಿದ್ಧವಾಜಿಯವರ ಸ್ನೇಹವನ್ನೂ ಅನುಸರಣೆಯನ್ನೂ ಹೆಚ್ಚಾಗಿ ಮಾಡುತ್ತಾ ಬಂದನು. ಇವರಿಬ್ಬರೂ ಒಂದೇ ಕತ್ತಿನಲ್ಲಿ ಪ್ರಾಣ ಹೋಗುವ ಮಟ್ಟಿನ ಗೆಳೆತನ ಉಂಟಾಯಿತು. ಸ್ವಲ್ಪ ಹೊತ್ತು, ನಾರಪ್ಪಯ್ಯ ಗುಡಿಗೆ ಹೋಗದಿದ್ದರೆ ಕೂಡಲೆ ಸಿದ್ದ ವ್ಯಾಜಿ ಯು ಹೇಳಿ ಕಳುಹಿಸುತ್ತಿದ್ದನು. ಈ ದೆಸೆಯಿಂದ ಆಗ್ರಾಮದ ಮುಖ್ಯ ಮಹಾಜನಂಗಳ ಸ್ನೇಹವೂ ಸಂತನಿಗೆ ಹೆಚ್ಚಾಯಿತು. ಆ ಜನರು ಕತ್ತಲೇ ಕಾಲದಲ್ಲಿ ವಾಡಿಕೆಯಾದ ವಿಜಯಯಾ ತೆಗೆ ಹೊರಡುವಾಗ ಆ ನಾರಪ್ಪಯ್ಯನ ಸಂಗಡ ಬೇಕಾ ದ ಆಲೋಚನೆಯನ್ನು ಮಾಡುತ್ತಾ ಇದ್ದರು. ಬರುತಬರು 12