ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೦ ಮಾಡಿದ್ದು ಣೋ ಮಹಾರಾಯ' ತಾ ಆ ಗ್ರಾಮದ ಹೊಂತಕಾರಿಗಳೆಲ್ಲಾ ಇವನಲ್ಲಿ ಹೆಚ್ಚಾದ ಭಕ್ತಿ ಯನ್ನೂ ನಂಬಿಕೆಯನ್ನೂ ಇಟ್ಟುಕೊಂಡಿದ್ದರು. - ಈ ಉವಾದ್ರಿಯು ಆ ಜನರಿಗೆ ನಾನಾ ಬಗೆಯಲ್ಲಿ ಸಹಾಯ ವಾಗಿ ಅವರಿಗೆ ಉಪಕಾರವನ್ನು ಮಾಡುತ್ತಾ ಇದ್ದನು. ಈ ಮಧ್ಯ ಕಾಲದಲ್ಲಿ ಮೇಲೆ ಹೇಳಿದಂತೆ ದೀಕ್ಷಿತರ ವಿಷಯವಾಗಿ ಈ ನಾರಪ್ಪಯ್ಯನಿಗೆ ಅಸಮಾಧಾನ ಉಂಟಾಗಿತ್ತು. ಇದು ಬೂದಿಮುಚ್ಚಿದ ಕೆಂಡವಾಗಿ ಒಳಗೆ ಪ್ರಜ್ವಲಿಸುತಾ ಮೇಲೆ ಸರ ಸಾಧಾರಣವಾಗಿರುತಾ ಇತ್ತು. ನನ್ನನ್ನು ಅಪ್ರಯೋಜಕ ಎಂದ ನಲ್ಲ ಈ ದೀಕ್ಷಿತ ! ಎಂದು ಉವಾದ್ರಿಯು ಆಗಾಗ್ಗೆ ತೊಳಲು ತಾ ಇದ್ದನು. ತನಗೆ ಚೆನ್ನಾಗಿ ಅಹಂಕಾರ ನೋವನವಾ ದಕ್ಕೆ ಯಾವ ರೀತಿಯಲ್ಲಿ ಎನಮಾಡಿದರೆ ಪ್ರತೀಕಾರವಾ ಗುತ್ತೆ ಎಂದು ನಾರಪ್ಪಯ್ಯನು ತನ್ನ ಮನಸ್ಸಿನಲ್ಲಿಯೇ ಯೋ ಚಿಸಿಕೊಳ್ಳುತಾ ತನಗೆ ಪರಮಾಪ್ತನಾಗಿದ್ದ ಗುಡೀ ಸಿದ್ದ ಜಿಯಲ್ಲಿ ಆಗಾಗ್ಗೆ ಹೇಳಿಕೊಳ್ಳುತ್ತಾ ಇದ್ದನು. ಈ ಯೋಚ ನೆಯ ಆವರ್ತಿ ದಿನೇದಿನೇ ಹೆಚ್ಚು ತಾ ಬಂದಹಾಗೆಲ್ಲಾ ಅಸ ಮಾಧಾನವು ರೈಷರೂಪವಾಗಿ ಪರಿಣಮಿಸುತಾ ಬಂತು, ದೀಕ್ಷಿತನು ಇವನ ಕ್ಷೇಮಕ್ಕಾಗಿ ಹೇಳಿದ ಮಾತ್ರ ಮಾಡಿದ ಉಪಕಾರವೂ ಸಹಾ ಕ್ರೋಧದ ಹೊಗೆಯಲ್ಲಿ ಮುಚ್ಚಿ ಹೋಯಿ ತು. ಇಷ್ಟಾದರೂ ಉವಾದಿಯು ದೀಕ್ಷಿತರ ಮನೆಯಲ್ಲಿಯೇ ಊಟಾ ಮಾಡುವುದು ಅವರಮನೆಯಲ್ಲಿಯೇ ಮಲಗಿಕೊಳ್ಳುವು ದು ಇದನ್ನು ಮಾತ್ರ ಬಿಡಲಿಲ್ಲ. ಬಿಟ್ಟರೆ ಇವನಿಗೆ ಆ ವೂರ ಲ್ಲಿ ಒಂದು ಹೊತ್ತಾದರೂ ಅನ್ನ ಹುಟ್ಟುವುದು ಹೇಗೆ ? ಎಲ್ಲರೂ ಎ 6.