ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣ್ಣೆ ಮಹಾರಾಯ, ೯೧ ಬಾಯಲ್ಲಿ ಮಾತನಾಡುತ್ತಾರೆ, ಬೇಕಾದಷ್ಟು ಸ್ನೇಹವನ್ನು ನಟಿಸುತ್ತಾರೆ. ಕಾವ್ಯದಲ್ಲಿ ಸಹಾಯಮಾಡಬೇಕಾದರೆ ಹಿಂತೆಗೆ ಯುತಾರೆ. ಸಾವಿರಕಾರಿ ಗೋವಿಂದ ಎನ್ನ ಬಹುದು, ಒಬ್ಬ ದಾಸೈಯ್ಯನಿಗೆ ಇಕ್ಕುವುದು ಕಷ್ಟ. ಉವಾದ್ರಿಯ ದೈವವು ಪ್ರಛನ್ನ ವಾಗಿಯೇ ಇತ್ತು. ೭ನೇ ಅಧ್ಯಾಯ. ಈ ಮಧ್ಯೆ - ಮಹಾದೇವನ ವಿದ್ಯಾಭ್ಯಾಸವು ಸಾಂಗವಾಗಿ ನಡೆಯಿತು. ಯಾರು ನೋಡಿದರೂ ಒಳ್ಳೆ ವಿದ್ವಾಂಸ ಎನ್ನುವ ಹಾಗೆ ಇತ್ತು. ಇವನ ರೂಪನ್ನೂ ಯೋಗ್ಯತೆಯನ್ನೂ ಇವರ ತಂದೆಯ ಆಸ್ತಿಯನ್ನೂ ನೋಡಿ ಎಲ್ಲರೂ ಇವನಿಗೆ ಹೆಂಣಕೊ ಡುವುದಕ್ಕೆ ನಾನು ತಾನೆಂದು ಮೇಲಾಡುತಿದ್ದರು. ದೀಕ್ಷಿತನು ತನ್ನ ಸೋದರಮಾವನಾದ ಪಶುಪತಿ ಸಾಂಬಶಾಹಿಯ ಮಾತು ವಿನಾ ಶುಭಕಾರಗಳು ಯಾವುದನ್ನೂ ಜರಗಿಸುತಿರಲಿಲ್ಲ. ಕಡೆ ಗೆ ಸಾಂಬಶಾಸ್ತ್ರಿಯ ಮಗನ ಮಗಳನ್ನು ಕೊಡುವುದಾಗಿ ನಿಶ್ಚ ಯವಾಯಿತು. ಹನ್ನೆರಡು ಕೂಟಗಳು ಸರಿಬಂತು. ಮೈಸೂ ರಲ್ಲಿಯೇ ಲಗ್ನ ಬೆಳೆಯಿತು. ಹುಡುಗಿಯ ರೂಪನೂ ಅವಳ ಗುಣಾತಿಶಯಗಳನ್ನೂ ಹೀಗೆಂದು ಇಲ್ಲಿ ನಾನು ವರ್ಣಿಸಲಾರೆ. ಮುಂದೆ ಎಲ್ಲಾ ತಿಳಿಯಬಹುದಾಗಿದೆ. ಪಶುಪತಿ ಸಾಂಬಶಾಸ್ತ್ರಿ ಯ ಯೋಗ್ಯತೆಯಲ್ಲಿ ಶ್ರೀಕೃಷ್ಣರಾಜ ಪ್ರಭುವಿಗೆ ಇದ್ದ ಗೌರ ನವನ್ನು ತೋರಿಸಲು ಈ ಸಮಯವನ್ನು ದೊರೆಯು ಬಿಡದೆ