ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


** ಮಾಡಿದ್ದುಣೋ ಮಹಾರಾಯ, ಪಶುಪತಿ-ಜನ್ಮಾಂತರದಲ್ಲಿ ಅನೇಕ ತಪಸ್ಸನ್ನು ಮಾಡುತಾ ಇರುವಾಗ ಲೇಶಮಾತ್ರ ತಪಸ್ಸು ಭಂಗವಾಗಿ ಪು ನರ್ಜನ್ಮ ಬಂದು ಮಹಾ ಪದವಿದೊರೆಯುವುದು, ಅಂ ಥಾ ತಪಸಿಗಳ ಸ್ಪರ್ಶದಿಂದ ಇತರರು ಪವಿತ್ರರಲ್ಲವೆ ? ದೊರ-ನಿಮ್ಮ ಮಾತಿನಮೇಲೆ ಎನು ಹೇಳುವುದಕ್ಕೂ ನನಗೆ ತೋರುವುದಿಲ್ಲ. ನಿಮ್ಮ ಇಷ್ಟ ಹೇಗೆ ಇದೆಯೋ ಹಾ ಗಾಗಲಿ. ಈ ಪ್ರಕಾರ ಅಪ್ಪಣೆಯಾಯಿತು. ಅದಕ್ಕೆ ತಕ್ಕ ಏರ್ಪಾ ಡುಗಳೆಲ್ಲಾ ಆಯಿತು. ಗೊತ್ತಾದ ದಿವಸ ಸಾಯಂಕಾಲ ಶಿವ ಪೂಜೆ ಬೆಳೆದಮೇಲೆ ಪ್ರಭುವು ಗುಲಾಬಿ ರಂಗಿನ ಶಾಲುರುಮಾ ಅನ್ನು ಸುತ್ತಿ ಬಿಳೀಸಂದರಖಾನೆ ಅಂಗಿಯನ್ನು ತೊಟ್ಟು ಕಠಾ ರಿಕಜ್ಜೆ ಹಾಕಿ ಕರೀ ಅಂಚಿನಪಂಚೆಯನ್ನುಟ್ಟು, ರತ್ನ ಪಡಿಕಾರ ಚುರಿಸಿಕಿಂತಾಬು ಕೆಲಸಮಾಡಿರುವ ಪಾವಾಸನ್ನು ಮೆಟ್ಟಿ ಮೇ ನಾದಲ್ಲಿ ಸವಾರಿ ಬಿಮಾಡಿದರು. ಬಾಣಶೀರ್ವಾದ, ಫಲ ಮಂತ್ರಾಕ್ಷತೆ, ಕನ್ನಡಿ ಕಲಶವನ್ನು ಹಿಜ ಮುತ್ತೈದೆಯರು, ಓಲಗವೊದಲಾದ ವಾದ್ಯಗಳು, ಇವೇ ಮುಂತಾದ ರಾಜನು ರಾದೆಗಳೊಡನೆ ಮದುವೇ ಮನೆಯ ಬಾಗಿಲಲ್ಲಿ ಇದಿರುಗೊ೦ ಡು ಸಾಂಬಶಾಸ್ತಿಯೂ ಇತರರೂ ಸವಾರಿಯನ್ನು ಒಳಕ್ಕೆ ಬಿಜಮಾಡಿಸಿದರು. ಅಲ್ಲಿ ಮೇಲುಕದ್ದು, ಮೊದಲಾಗಿ ವಿಧವಿಧ ವಾಗಿ ಶೃಂಗಾರಮಾಡಿ ರಚಿಸಿದ್ದಂಥಾ ಪೀಠದಮೇಲೆ ಕೃಷ್ಣ ರಾಜ ಪ್ರಭುಗಳು ಬಿಜಯಂಗೈದು ಕುಶಪ್ರಶ್ನೆಯನ್ನು ಮಾಡಿ ದರು. ಅಲ್ಲಿದ್ದ ವೈದಿಕರು ವೇದಹನಸುಗಳನ್ನು ಹೇಳಿ ಆಶೀ