ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩ ಮಾಡಿದ್ದು ಣೋ ಮಹಾರಾಯ, ಯಾರಾದರೂ ಬನ್ನಿರ, ಯಂಕ, ದೊಡ್ಡಚ್ಚಿ, ಯಾರಾದರೂ ಬನ್ನಿರೆ ; ಪಾತಿ, ನೀ ಬಾರೆ ; ಸಾಕಿ, ನೀನು ಹಿಡಿಯ ; ಒಳ್ಳೇದಾ ಯಿತು, ಆರತಿ ಎತ್ತಿದನ್ನು ಹೇಳಿ ; ಸಾಕುಕಣೆ, ಹೇಳಿ ಒಂದುನುಡಿ ; ಸವಾರಿ ಎಷ್ಟು ಹೊತ್ತು ಕೂತಿರಬೇಕು, ನಿಮಗೆ ಬಾರದೇ ಆದ ರೆ ಒಳ್ಳೆದಾಯಿತು, ನಾನಾದರೂ ಒಂದುನುಡಿ ಹೇಳುತೇನೆ, ಬನ್ನಿ ; ಅಂಗೈಯ್ಯ ಹಸೆಮಣೆಮೇಲೆ | ನೆಸ್ಯಮಾಲಕುಮಿಕುಳ್ಳಿ ರಲು | ಬಾಲೆಯರೆಲ್ಲಾ ಅತಿಹರುಷದಲಿ | ನೆಸ್ಯಮಾ ಲಕುಮಿಗು | ಸುಂಣದರಾಯರು ತಿಕ್ಕುವಾ ರಾತಿಯ ಬೆಳಗಿರೆ | ಸೋಬಾನೆ ! ಸೋಬಾನೆ ಎನ್ನುವುದಕ್ಕೆ ಕೂಡ ಕೈಲಾಗದೇನರೆ, ಸುಷ ನಾ ತೀರ ? ನಾನೆಲ್ಲಿಕಾಣೆನಮ್ಮ ವ್ಯ, ಬಾರದೇ ಇದ್ದರೆ ಬಿಡಿ, ಆರತಿ ಹಣ ನಿಮಗೇ ಇಲ್ಲ, ನಿಮ್ಮಿಂದ ನನಗೂ ತಪ್ಪಿಹೋಯಿ ತು. ಮನೆಗೆ ಹೋದರೆ ಅವರು ಇನ್ನು ತಕ್ಕೊತಾರೆ ಮಲೇ ಗುರಿಕಾರರನ್ನ, ರಾತ್ರೆ ಇಷ್ಟೊತ್ತು ಮಾಡಿಕೊಂಡು ಬಂದೆಯಲ್ಲ ಏನತಂದೆ ಎಂದು ಅಗಾಯಿಸುತಾರೆ. ನಾನು ಎನಜವಾಬುಹೇಳಲಿ ? ವೇ! ಎಂದು ತಾನು ಮುಖವನ್ನು ಅರೆಯಾಗಿ ಮುಚ್ಚಿ ಕೊಂಡು ಇದ್ದ ಸೆರಗನ್ನು ಆಕೆಯು ಶುದ್ಧವಾಗಿ ಕೆಳಕ್ಕೆ ಜಾರಿಸಿಬಿಡಲು, ಹೊ ದ್ದ ಪಂಚೆಯನ್ನೇ ಹೆಂಗಸರಹಾಗೆ ಹೊದ್ದಿದ್ದ ವ್ಯಕ್ತಿ ಹೆಂಗಸಲ್ಲ, ನಕಲೀನಾರಣಪ್ಪನೆಂದು ತಿಳಿದುಕೊಂಡರು. ಸಭೆಯಲ್ಲಾ ಗೊಳ ಎಂದು ಹೊಟ್ಟೆಯೆಲ್ಲಾ ಹುಣ್ಣಾಗುವಹಾಗೆ ನಕ್ಕಿತು. ಹೆಂಣು ಗಂಡು ಆದಿಯಾಗಿ ಹಾಸ್ಯ ರಸದಲ್ಲಿ ಮುಳುಗಿದರು. ಆಗ ದೊರೆ 13