ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೦ ಮಾಡಿದ್ದು ಣೋ ಮಹಾರಾಯ, ಅನ್ನ ಅಪಾಟಲಿಪುಷ್ಟ ವರ್ಣ ಸದೃಶಂ ಕಿಂಚ್ಚಿ ತುಷಾರಾತಂ .........ಭಗ್ತಾಚದಂತಾವಳೀ ಆಜ್ಯಂದೂರತರಂನವಾಪಿಲವಣಂ ಶಾಖಾಸು ವಸ್ತಾನಹಿನಿತ್ಯಂ ಚಿತ್ರವಿಚಿತ್ರಭೋಜನಮಿದಂ ಪ್ರತ್ಯ (ಚಾಂದ್ರಾಯನಂ 1) ಈ ಶ್ಲೋಕಕ್ಕೆ ಅನುಸಾರವಾಗಿಯೇ ಇತ್ತು, ಈ ಶಾಸ್ತ್ರಿಗಳು ಮನಸ್ಸು ಬಂದಹಾಗೆ ತಿಂಡಿಯನ್ನು ಹಾಕಿ ಹೊಟ್ಟೆ ಎತ್ತದಹಾಗೆ ಮಾಡಿದಾರೆ ಮಹಾಸ್ವಾಮಿ, ಹೀ ಗೆಂದು ನಕಲೀ ನಾರಣಪ್ಪನು ಕೂಗಿದನು. ಆಗ ರಾಜರು ನಗುತಾ ಮೇಲಕ್ಕೆ ಎಳಲಾಗಿ ಶಾಸ್ತ್ರಿಗಳು ಅನೇಕ ತಟ್ಟಿಗಳಲ್ಲಿ ನಸರನ್ನು ಒಪ್ಪಿಸಿದರು. ದೊರಯು ವಾಡಿ ಈ ಪ್ರಕಾರ ಅದೆಲ್ಲವನ್ನೂ ಸುಮ್ಮನೆ ಕೈಯಿಂದ ಮುಟ್ಟಿ ವಧೂವ ರರಿಗೆ ಖಿಲ್ಲನ್ನು ತರಿಸಿಕೊಟ್ಟು- ಶಾಸ್ತ್ರಿಗಳೆ, ಪಾತಿವ್ರತ್ಯಕ್ಕೆ ಬೇಕಾದ ಸಮಸ್ಯಲಕ್ಷಣಗಳೂ (ಮದುವೇ ಹೆಂಣನ್ನು ತೋರಿ ಸುತಾ) ಈ ಹೆಂಣುಮಗಳಲ್ಲಿರುವ ಕಾರಣ ಈಕೆಗೆ ಸೀತಮ್ಮ ನೆಂದು ನೀವು ನಾಮಕರಣ ಮಾಡಿದ್ದು ಸಾರ್ಥಕವಾಯಿತು, ಎಂಬದಾಗಿ ಅಪ್ಪಣೆಕೊಡಿಸಿ, ಅಲ್ಲಿದ್ದ ಅಬಾಲವೃದ್ಧರಸಂಗಡ ಲೂ ಮಾತನಾಡಿ ಭವರಾಜಗಳ ಹೊಗಳಿಕೆಯ ಧ್ವನಿಯಿಂದ ಅರಮನೆಗೆ ಬಿಜಮಾಡಿದರು. ಆ ಸಮಯದಲ್ಲಿ ಸಾಂಬಶಾಸ್ತ್ರಿ ಯು ಮಹಾಸ್ವಾಮಿ, ಈ ಹೊತ್ತಿನ ಆನಂದವನ್ನು ನಾನು ಹುಟ್ಟಿದಾಗಿನಿಂದ ಅರಿಯೆ, ಎಂದನು. ಅಲ್ಲಿದ್ದ ಸಭೆಯಲ್ಲಾ ಮಹಾರಾಜರ ಸೌಲಭ್ಯವನ್ನೂ ವಿನಯವನ್ನೂ ದಾತೃತ್ವವನ್ನೂ ಹತ್ತು ಬಾಯಿ ಹೊಗಳಿದರು. ಇಂಥಾ ಸೌಲಭ್ಯವೂ ಮೃದುಸ್ವಭಾವವೂ ಗಾಂಭೀರದೊ ಡನೆ ಮಿಳಿತವಾಗಿ ಸೇರಿಕೊಂಡು ಒಂದರಿಂದ ಇನ್ನೊಂದು ಕೆಡದ