ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೨ ಮಾಡಿದ್ದು ಣೋ ಮಹರಾಯ. ತಮ್ಮ ಪ್ರಯೋಜನವನ್ನು ನಾನಾ ವಿಧದಲ್ಲಿಯೂ ಕಾಪಾಡಿಕೊ ಳ್ಳುತಾರೆ. ಮತ್ತರಾದ ಅರಸರು ತಮ್ಮ ಸಮೀಪದಲ್ಲಿದ್ದು ಕೊಂಡು ಹಗಲು ರಾತ್ರೆಯ ಕರ್ಣದಲ್ಲಿ ಜಪಿಸುವ ಜನರೇ ಆಪ್ತರೆಂದು ತಿಳಿಯುತ್ತಾರೆ. ಅಂಥವರು ಹೇಳಿದ ಹಾಗೆ ನಡೆ ಯತಕ್ಕದ್ದು ಮನುಷ್ಯ ಭಾವವಾಗಿದೆ. ಹೀಗೆ ಅರಸುಗಳ ಸಮಾಸದಲ್ಲಿ ಸೇರತಕ್ಕವರು ಅರಸನಿಗೂ ಜನರಿಗೂ ಮಧ್ಯೆ ನಿಂತು ಕಣವಿಲ್ಲದೆ ಅವರವರಿಗೆ ತಂದು ಹಾಕುತ್ತಾರೆ. ಕೊ ನೆಗೆ ಅರಸನ ಭೇಟಿಯೇ ಪ್ರಜೆಗಳಿಗಾಗದಂತೆ ಮಾಡುತಾರೆ. ಇಂಥಾ ಆಚರಣೆಯು ರೂಢಿಗೆ ಬಂದು ಪ್ರಜೆಗಳಲ್ಲಿ ತಾವು ಮಾತನಾಡಿದರೂ ತಮ್ಮ ಗೌರವ ಭಂಗವಾಯಿತೆಂದು ಅರಸು ತಿಳಿಯುತ್ತಾನೆ. ಇಂಧಾ ನಡತೆಯಿಂದ ದೊರೆಗೂ ಪ್ರಜೆಗಳಿಗೂ ಪೂರ್ತಿಯಾಗಿ ಅಗಲಿಹೋಗಿ, ಇವರ ಮನಸ್ಸು ಅವರಿಗೂ, ಅವರ ಮನಸ್ಸು ಇವರಿಗೂ ಗೊತ್ತಾಗದೆ ಪರಸ್ಪರ ದ್ವೇಷ ಹುಟ್ಟುವುದು. ಈ ಪ್ರಕಾರ ಬಲಿಷ್ಟರಾದ ದೊರೆಗಳು ಪ್ರಜೆ ಗಳಿಗೆ ಇಲ್ಲದ ಕಷ್ಟವನ್ನು ಕೊಡುತಾ ತಮ್ಮ ಆನಂದದಲ್ಲಿ ಕಾಲವನ್ನು ಕಳೆಯುತಾರೆ. ಈ ರೀತಿಯಾದ ನಡತೆಯು ಈ ಪ್ರಾಶದ ಅರಸರಲ್ಲಿ ಹೆಚ್ಚಾಗಿ ಇದ್ದು ನಿಜ. ದೊರೆಗಳು ಎನ್ನಿಸಿಕೊಂಡವರೆಲ್ಲರಿಗೂ ಈ ಭಾಗದಲ್ಲಿ ಲಲಾಟರೇಖೆಯು ಏಕರೀತಿಯಾಗಿದೆಯೋ ಎನ್ನು ವಹಾಗೆ ರಾಜಸಗುಣವು ಈ ಪುರುಷ ಶ್ರೇಷ್ಟರಲ್ಲಿ ಸ್ನೇಚ್ಛೆ ಯಾಗಿ ವಿಹರಿಸುವುದು. ಆದಾಗ್ಯೂ ಯುಗಾಂತರದಲ್ಲಿ ಪುರಾ ಣ ಪ್ರಸಿದ್ಧರಾದ ನಳ ಮಾಂಧಾತ ಶ್ರೀರಾಮ ಮೊದಲಾದ ಚಕ್ರ