ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಏರಿಕೆ'. ತಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ! ಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ | ಹೀಗೆಂದು ಕುಮಾರ ವ್ಯಾಸನು ರಾಮಾಯಣದ ವಿಷಯ ದಲ್ಲಿ ಹೇಳಿರುವ ಮಾತು, ರಾಮಾಯಣ, ಭಾರತ, ಈ ಎರಡು ಮಹಾ ಕಾವ್ಯಗಳಿಗೂ ವ್ಯಾಪಿಸುವುದು. ಯಾವ ಗ್ರಂಥಕರ್ತ ಯಾವ ಕವಿ ಏನ ಬರೆದಾಗೂ ಈ ಕಾವ್ಯಗಳಿಗೆ ಸಂಬಂಧಿಸಿದ ಹಾಗೆ ರಾಮಚಂದ್ರಚರಿತ್ರೆ, ಶ್ರೀಕೃಷ್ಣ ಚರಿತ್ರೆ, ಇವೇ ಹೆಚ್ಚಾಗಿ ತುಂಬಿರುವುದೇ ಹೊರತು ಬೇರೆ ಇಲ್ಲ. ಶ್ರೀರಾಮನೂ, ಶ್ರೀ ಕೃಷ್ಣನೂ, ಮಹಾ ವಿಷ್ಣುವಿನ ಅವತಾರಗಳಾಗಿರುವುದರಿಂದ ಇವರು ದೋಷರಹಿತರಾಗಿಯೂ ಗುಣವಿಶಿಷ್ಟ ರಾಗಿಯೂ ಇರು ವುದನ್ನು ಸರರೂ ಅಂಗೀಕರಿಸಬೇಕು. ಸಾಧಾರಣ ಮರ್ತ್ಯ ರಂತೆ ಇವರೂ ಲೋಕದ ಕಷ್ಟಸುಖಗಳಿಗೆ ಗುರಿಯಾಗಿದ್ದ, ರಂದು ಹೇಳುವಮಾತು ತಿಳಿಯದವರಿಗೆ ದೈವಭಕ್ತಿ ಹುಟ್ಟಿಲೆಂದು ತೆಗೆದ ಸುಲಭವಾದ ದಾರಿಯೇ ಹೊರತು ಜ್ಞಾನಿಗಳಿಗೋಸ್ಕರ ಹುಟ್ಟಿದ ವಿಧಿಯೆಂದು ಭಾವಿಸಲಾಗದು, ನಿರ್ಮಲವಾದ ಗುಣ ದಲ್ಲಿ ದೋಷವಿದೆ ಎಂದರೆ ಆಭಾಸ ತೋರದೇ ಇರಲಾರದು. : ಇಂಥಾ ನಿರ್ನುಲ ಮೂರ್ತಿಗಳ ಚರಿತ್ರೆಯು ಎಷ್ಟು ಆನಂದ ವನ್ನೂ ಜ್ಞಾನವನ್ನೂ ಹುಟ್ಟಿಸಿದಾಗ್ಯೂ, ಕಾಲಾನು ಕಾಲದಲ್ಲಿ