ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೮ ಮಾಡಿದ್ದುಣೋ ಮಹಾರಾಯ, ಐಶ್ವರವೂ ರಾಜಪೂಜ್ಯತೆಯೂ ಬೇರೇ ಸಂಬಂಧಕ್ಕೆ ಸದಾಶಿವದೀ ತನು ಮನಸ್ಸು ಮಾಡಲು ಪ್ರತಿಬಂಧಕಗಳಾಗಿರಲಿಲ್ಲವೆಂದು ಹೇಳುವುದಕ್ಕೆ ಆಗುವುದಿಲ್ಲ. ಆದರೇನಾಯಿತು ? ಇಂಧಾ ಸಂದರ್ಭದಲ್ಲಿ ಗಂಡನಮನಸ್ಸು ಇದ್ದ ಹಾಗೆಯೇ ಹೆಂಡತಿಯ ಮನಸೂ ಇರುವುದು ಹೇಗೆ ? ಅವರವರ ಸಂಬಂಧಾನು ಬಂಧಗಳೇ ಬೇರೆ. ಅವರವರ ಅಭಿಮತ ಗಳೇ ಬೇರೆ. ಆದಕಾರಣ ತಿಮ್ಮಮ್ಮ ನು ಮೈಸೂರ ನಂಟತನಕ್ಕೆ ವಿರೋಧಿಯಾಗಿದ್ದಳು. ಈ ವಿರೋಧವು ನಂಟತನದಿಂದ ಸೊಸೆ ಮೇಲಕ್ಕೆ ಹಾರಿತು. ಎಲ್ಲರ ಮೇಲಿನ ಕೋಪವನ್ನೂ ತಿಮ್ಮ ಮೃ ನು ಸೊಸೆಮೇಲೆ ತೆಗೆಯಲು ಆರಂಭಿಸಿದಳು. ಸೀತಮ್ಮ ನಿಗೆ ಋತುಶಾಂತಿ ಪ್ರಸ್ತುತ ಬೆಳೆದ ತರುವಾಯ ಗಂಡನ ಸಂಗಡ ಮಗಳನ್ನು ಪ್ರಯಾಣಮಾಡಿ ಕಳುಹಿಸಿ ಕೊ ಡುವಾಗ ತಂದೆತಾಯಿಗಳಿಗೂ ಮತ್ತು ಇತರ ಸಂಬಂಧಿಗ ಳಿಗೂ ಮನಸ್ಸು ಒಕಲ್ಪವನ್ನು ಹೊಂದಿ ಕಂಣಿನಲ್ಲಿ ಕುಳ್ಳನ್ನು ವುದು ಮನುಷ್ಯ ಸ್ವಭಾವಕ್ಕೆ ಸೇರಿದ ಸಂಗತಿಯಾಗಿದೆ. ಆ ಕಾಲದಲ್ಲಿ ವಾಡಿಕೇಪ್ರಕಾರ ಮೊಮ್ಮಗಳು ತಾತನಾದ ಪಶುಪ ತಿ ಸಾಂಬಶಾಸ್ತ್ರಿಗೆ ನಮಸ್ಕಾರ ಮಾಡುವುದಕ್ಕೆ ಬಂದಳು. ಆಗ ಈತನಿಗೂ ಬುದ್ದಿ ಕಳವಳಗೊಂಡಿತು. ಆಶಾಸ್ತ್ರೀಯು ಸೀತೆ ಯನ್ನು ಕುರಿತು- ತಾಯಿ, ಗಂಡನಮನೆಗೆ ಹೋಗಿ ಬರು ತೀಯ ? ಜೋಕೆ, ಬುದ್ಧಿವಂತಳಾಗಿರು ಎಂದು ಹೇಳಿ ಪ್ರಯಾ ಣಮಾಡಿಸಿದನು. ಸಾವನಮನೆಗೆ ಬಂದಮೇಲೆ ಸೀತಮ್ಮನ ನಡತೆಯನ್ನು