ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1. ಮಾಡಿದ್ದು ಕ್ಯೂ ಮಹಾರಾಯ, ೧ot ಇಲ್ಲಿ ಸಂಕ್ಷೇಪವಾಗಿ ಕಾಣಿಸಬೇಕಾಗಿದೆ. ಈ ಹುಡುಗಿಯು ಅತ್ತೆ, ಮಾವ, ಗಂಡ, ಇವರು ಏನಹೇಳಿದಾಗ ಕೋಪಮಾಡಿಕೊ ಳ್ಳುತಿರಲಿಲ್ಲ. ಅವರ ಸಂಗಡ ಮಾತನಾಡುವಾಗ ಹಸನ್ನು ಖಿ ಯಾಗಿ ಮಾತನಾಡುತಿದಳು, ಇತರರ ಸಂಗಡ ನಗುತನಗು ತಾ ಮಾತನಾಡುತಿರಲಿಲ್ಲ. ಪರಪುರುಷರ ಸಂಗಡಮಾತನಾಡು ವುದೇ ಇಲ್ಲ. ಅಥವಾ ಸಂದರ್ಭ ತಪ್ಪಿ ಮಾತನಾಡಬೇಕಾಗಿ ಬಂ ದರೆ ಆ ಪುರುಷನ ಮುಖವನ್ನು ನೋಡದೆ ತಲೆಯನ್ನು ಬಗ್ಗಿ ಸಿಕೊಂಡು ನಗದೆ ಮಿತವಾಗಿ ಮಾತನಾಡುತಿದ್ದಳು. ತನ್ನ ಗಂಡನೇ ತನಗೆ ದೇವರೆಂದು ತಿಳಿದುಕೊಂಡಿದ್ದಳು. ಮನೆಯ ಕೆಲಸವನ್ನು ಮಾಡಿಕೊಂಡು ಒಳ್ಳೆ ಮಾರ್ಗದಲ್ಲಿ ಕಾಲವನ್ನು ಕಳೆಯುತಾ ಒಳ್ಳೆ ಕಥೆಗಳನ್ನು ಕೇಳುತಾ ಕೆಟ್ಟ ಜನರ ಸಂಗಡ ಸೇರದೆ ಅವರೊಡನೆ ಮಾತನಾಡದೆ ಇರುತಿದ್ದಳು. ತನಗೆ ಕೇ ಡನ್ನು ಮಾಡಿದವರೇ ಕೆಟ್ಟವರೆಂದು ಈಕೆ ತಿಳಿಯುತ್ತಿರಲಿಲ್ಲ. ತನ್ನ ಗೋಜಿಗೆ ಬಾರದೇ ಇತರರಿಗೆ ಕೇಡನ್ನು ಮಾಡತಕ್ಕ ವರೂ ತನಗೆ ಶತ್ರುಗಳೆಂದು ತಿಳಿಯುತಿದ್ದಳು. ಮನೆಯಲ್ಲಿ ಚಾಕರಿ ಮಾಡುವ ಬಾಂದಿಗಳಲ್ಲಿ ಹೆಚ್ಚು ಮಾತನಾಡುತಿರಲಿಲ್ಲ. ಒಡವೆ ಇಲ್ಲ ಸೀರೆ ಇಲ್ಲ ಎಂದು ಮನಸ್ಸನ್ನು ಚಿಕ್ಕದಾಗಿ ಮಾ ಡಿಕೊಂಡವಳೇ ಅಲ್ಲ. ಹಬ್ಬ ಹರಿದಿನಗಳಲ್ಲಿ ಬೇಕಾದ ಒಡವೆ ಯನ್ನು ಇಟ್ಟುಕೊಳ್ಳುತಿದ್ದರೂ ಡಂಭವಾಗ ಸೀರೆಯನ್ನು ಮಾ ತ್ರ ಉಡುತಿರಲಿಲ್ಲ. ಇದ್ದ ಒಡವೆ ಇತರರಿಗೆ ಕಾಣಲೆಂದು ಸೆರಗನ್ನು ತೆಗೆದುಹಾಕುವುದನ್ನು ಇವಳು ಅರಿಯಳು. ಹೆಚ್ಚಾಗಿ ಶಂಗಾರ ಮಾಡಿಕೊಳ್ಳುವುದರಲ್ಲಿ ಇಚ್ಛೆ ಇಲ್ಲ.