ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


viii ಮನುಷ್ಯನ ಬುದ್ದಿ ಜೆಡ್ಡು ಕಟ್ಟಿ ಕಥೆಯ ನಿಜವಾದ ಪ್ರಯೋಜ ನವು ಪೂರ್ತಿಯಾಗಿ ದೊರೆಯದಂತೆ ಆಗಬಹುದು. “ ದುಃಖ ಬೆರೆಸದ ಸುಖನದಾರಿಗೆ ಸಿಕ್ಕುವುದು ? ” ಎಂಬ ಮಾತು ಭಗ ನಂತನ ಸ್ವರೂಪಗಳಿಗೆ ಹೇಳಿದ್ದಲ್ಲ. ಸಹಜವಾಗಿ ನಿರ್ಮಲವಾ ಗಿರುವ ವಸ್ತುವನ್ನು ದೋಷರಹಿತವಾದ್ದೆಂದು ಎಷ್ಟು ಸಾರಿ ಎಷ್ಟೆಷ್ಟು ವಿಧದಲ್ಲಿ ಬಣ್ಣಿಸಿದಾಗೊ ಬುದ್ಧಿಯು ರಾಟೆಯ ಒಂದೇ ಗಾಡಿಯಲ್ಲಿ ಓಡಾಡುವ ಹಗ್ಗದಂತಾಗುವುದಲ್ಲದೆ ಅದಕ್ಕೆ ವಿಸ್ತಾರ ವಾದ ಪ್ರದೇಶದಲ್ಲಿ ಸ್ಟೇಚ್ಛಾ ಪ್ರವರ್ತಿ ಯುಂಟಾದಂತಾಗಲಿಲ್ಲ ; ಆ ಬುದ್ದಿಗೆ ಕೂಪ ಕೂರ್ಮದ ಪ್ರಭಾವ ಶಾತವಾಗುವುದು, ಇಂಥಾ ನಿರ್ದುಷ್ಟ ಪದಾರ್ಥಗಳ ವರ್ಣನೆಯನ್ನು ಬಿಟ್ಟು ಕೆಳಕ್ಕೆ ಇಳಿದರೆ, ಬುದ್ಧಿಯ ಜೋವು ಬಿಟ್ಟಂತಾಗುವುದು. ಅಂಥಾ ನಿರ್ಮಲ ಮೂರ್ತಿಗಳಾದ ಶ್ರೀರಾಮ ಸೀತಾದೇವಿ, ಯುದ್ಧಿ ಹಿರ ಪದಿ, ಇವರುಗಳ ಗುಣಗಳಲ್ಲಿ ಕೆಲವು ಭಾಗವನ್ನು ಹೊಂದಿ, ಲೋಕದ ಅತಾಡಿಗೆ ಸಿಕ್ಕಿ ಕಷ್ಟಕ್ಕೆ ಗುರಿಯಾದರೂ, ತನ್ನು ಧೀರೋದಾತ್ತ ಗುಣಗಳನ್ನು ಬಿಡದೇ ಇರತಕ್ಕ ಪಾತ್ರಗ ಳನ್ನು ಮನುಷ್ಯ ಮಾತ್ರದವರಲ್ಲಿ ಆರಿಸಿಕೊಂಡೋ ಊಹಿಸಿ ಕೊಂಡೋ ವರ್ಣಿಸುವುದು ಮನಸ್ಸನ್ನು ಚೆನ್ನಾಗಿ ಆಕರ್ಷಣ ಮಾಡುವುದರಲ್ಲಿ ಸಂಶಯವಿಲ್ಲ. ಪುರಾಣ ಪ್ರಸಿದ್ದರು ವ್ಯಾಕ ರಣದ ಸೂತ್ರಗಳಾಗಿದ್ದಾರೆ. ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದಾರ,