ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೭ ಮಾಡಿದ್ದು ಮಹಾರಾಯ, ದೊಡ್ಡವರ ಮನೆಗಳಲ್ಲಿ ಮೊರದ ಬಾಗಿನಕ್ಕೆ ಅಣಿಮಾ ಡಿದ್ದನ್ನು ನೋಡಿದವಳು, ಅದರ ಹಾಗೆಯೇ ಇಲ್ಲಿ ಯೂ ಮಾಡಬೇಕೇನೋ ಎಂದು ಅಚ್ಚಕಾಗಿ ಆ ಣಿಮಾಡಿದಳು. ಒಂದು ತೆಂಗಿನಕಾಯಿ ಸಾಲಲಿಲ್ಲ. ಹೀಗೆ ಸಾಲಲಿಲ್ಲವೆಂದು ಅತ್ತೆಗೆ ಸೊಸೆ ಹೇಳಿದಳು. ಆಗ ತಿನ್ನು- ಅಲ್ಲಕಣೆ ಗಯ್ಯಾಳಿಗೌಡಿ, ತೆಂಗಿನಕಾಯಿ ಇರಿಸು ಬಾಗಿನಕ್ಕೆ ಎಂದು ನಿನಗೆ ಯಾರೆ ಹೇಳಿದವರು ? ನಿನೆಡೆಯಲ್ಲಿ ಬೇಯುವವರು ಯಾರು ನಮ್ಮ , ಹೇಳದೆ ಕೇಳದೆ ಯಾವ ನಿಸೂರಿನಿಂದ ತೆಂಗಿನಕಾಯ ನ್ನು ಬಾಗಿನಕ್ಕೆಲ್ಲಾ ಇರಿಸಿದೆಯೆ ? ನಿನಗೆ ಯಾರೆ ಸ್ವತಂತ್ರ ಕೊಟ್ಟವರು ? ಹೊಟ್ಟೆಗೆ ಅನ್ನಾ ತಿನ್ನು ತೀಯೋ ಮಣ ತಿನ್ನುತೀಯೊ ? ಹೀಗೆಂದು ವಿಸ ರೀತವಾದ ಕೋಪದಿಂದ ಬಂದು ಒಂದು ತೆಂಗಿನಕಾ ಯನ್ನು ತೆಗೆದುಕೊಂಡು ತಿನ್ನಮ್ಮನು ಸೊಸೆಯ ತಲೆಯಮೇಲೆ ಕುಕ್ಕಿದಳು. ಪಟ್ಟು ಬಲವಾಗಿಯೇ ಬಿತ್ತು. ಆ ಹುಡುಗಿಯು ತಡೆಯಲಾರದೆ ಅಯ್ಯೋ ಎಂದು ಸ್ವಲ್ಪ ಗಟ್ಟಿಯಾಗಿ ಎಂದಳು. ಆಗ ತಿಮ್ಮ ಮೃ ನು- ಕೂಗುತೀಯ, ತೊಂಡೂರ ರಾಕ್ಷಸಿ ? ಈ ಗ ನಿನಗಾದ್ದೇನೆ, ಆಪತ್ತು ಬಂದು ಚಾಷೇಲಿ ಸುತ್ತಿ ಕೊಂಡು ಹೋಯಿತೇನೆ, ಗಯ್ಯಾಳಿಗೌಡಿ, ಎನ್ನು ತಾ ಸೀತಮ್ಮನ ಕೆನ್ನೆ ಯನ್ನು ಹಿಡಿದು ಚಿವುಟಿದಳು. ಆ