ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨) ಮಾಡಿದ್ದುಣೋ ಮಹಾರಾಯ, ಸಹಜವಾಗಿದೆ. ಯಾವುದ ಮಾಡಿದರೆ ಅದೇ ತಪ್ಪು, ಯಾವು ದಬಿಟ್ಟರೆ ಅದೇ ತಪ್ಪು, ಹೀಗೆಲ್ಲಾ ಒಂದೊಂದು ಕೆಲಸದಲ್ಲಿ ಯೂ ಆ ಹುಡುಗಿಯಮೇಲೆ ಆಕ್ಷೇಪಣೆ ಮಾಡುವುದು, ಹಂಗಿ ಸುವದು, ಮೂದಲಿಸುವುದು, ನನಯಸಿಕ್ಕಿದಾಗ ಸೀತೆಯ ತೌರುಮನೆಯವರನ್ನು ಹೀಯಾಳಿಸುವುದು, ಇದೆಲ್ಲಾ ದಿನಗ ಟೈಲೇ ಚರದಲ್ಲಿಯೇ ನೇರಿ ಹೋಗಿತ್ತು. ಮಧ್ಯೆ ಮಧ್ಯೆ ಸಾಕಿ ಯ ಚೇಷ್ಟೆಯನ್ನು ಸಹಿಸುವುದು ಬಹುಕಷ್ಟವಾಯಿತು. ಒಂದು ದಿವಸ ಸಾಯಂಕಾ ಮಡಿವುಟ್ಟು ಕೊಂಡು ಒಲೆಯಮೇಲೆ ಅನ್ನ ಕ್ಕೂ ನಾರಿಗೂ ಎಸರ ಇರಿಸಿ ನೀರನ್ನು ಸೇರಿಕೊಂಡು ಬರು ವುದಕ್ಕೆ ಸೀತೆಯು ಹಿತ್ತಲಕಡೆಗೆ ಬಿಂದಿಗೆ ತೆಗೆದುಕೊಂಡು ಹೋದಳು. ಇದನ್ನು ನೋಡಿಕೊಂಡಿದ್ದ ಸಾಕಿಯು ಕೋಣೆಗೆ ಹೋಗಿ ಅನ್ನದ ಎಸರ ಇರಿಸಿದ ತಪ್ಪಲೆಗೆ ಒಂದು ಹಿಡಿ ಉಪ್ಪು ನ್ನು ಹಾಕಿ ಬಿಟ್ಟು ಗುಟ್ಟಾಗಿ ಹೊರಬಂದಳು. ಸೀತಮ್ಮ ನು ಅದು ಹೀಗಾಯಿತೆಂದು ಅನುಮಾನ ಪಡುವುದಕ್ಕೂ ಮಾರ್ಗ ವಿರಲಿಲ್ಲ. ಇವಳು ಒಂದು ಬಿಂದಿಗೆ ನೀರನ್ನು ಯಡದಸೆಂಟರ ಮೇಲೆ ಇರಿಸಿಕೊಂಡು ಇನ್ನೊಂದು ಬಿಂದಿಗೆ ನೀರನ್ನು ಬಲಗೈ ಯಲ್ಲಿ ಹಿಡಿದು ಕೋಣೆಗೆ ಬಂದು ಜಾಗ್ರತೆಯಾಗಿ ಅಡಿಗೇನಾ ಡಿದಳು. ಯದಾಪ್ರಕಾರವಾಗಿ ಹೊಳೆಯಲ್ಲಿ ಸಂಧ್ಯಾವಂದನೆಯ ನ್ನು ತೀರಿಸಿಕೊಂಡು ಬಂದಿದ್ದ ಗಂಡಸರೂ ಇತರರೂ ಊಟಕ್ಕೆ ಎದರು. ಮಹಾದೇವನು ಮಡಿ ಉಟ್ಟುಕೊಂಡು ಸಂ ಧ್ಯಾವಂದನೆ ಮಾಡಿ ದೇವರಿಗೆ ಮಂಗಳಾರ್ತಿಯನ್ನು ಮಾಡಿ ತರುವಾಯ ಎಲ್ಲರಿಗೂ ಮಣೆಯನ್ನೂ ಎಲೆಯನ್ನೂ ಹಾಕಿ ಎಲೆ