ವಿಷಯಕ್ಕೆ ಹೋಗು

ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೫ ಮಾಡಿದ್ದುಣ್ಣ ಮಹಾರಾಯ, ಸೀತಮ್ಮ ನು ಹುಟ್ಟಿದಾಗಿನಿಂದ ಅದುವರೆಗೆ ಇಂಥಾ ಶಿಕ್ಷೆ ಯನ್ನು ಹೊಂದಿದ ಅಭ್ಯಾಸವಿರಲಿಲ್ಲವಾದ್ದರಿಂದಲೂ ಸುಖವಾಗಿ ತೌರುಮನೆಯಲ್ಲಿ ಬೆಳೆದ ಹುಡುಗಿಯಾದ್ದರಿಂದಲೂ ತೋಳು ಕೈ ಸಹಾ ವಿಶೇಷವಾಗಿ ಸುಟ್ಟುಹೋಯಿತು. ಸೀರೆಯ ಸೆರ ಗೂ ಸುಟ್ಟುಹೋಯಿತು. ಆ ಹುಡುಗಿಯು ಹಾ ?” ಎಂದು ಸ್ವಲ್ಪ ಗಟ್ಟಿಯಾಗಿ ಕೂಗಿದಳು. ಆಗ ನಿಮ್ಮ ಮೈ ನು ಅತಿ ರೋಷದಿಂದ ನಾಲಿಗೇ ಮಾಡುತೀಯ, ಶೂರ್ಪನಖಿ, ಎಂ ದು ಅದೇ ಕೊಳ್ಳಿಯ ಹಿನ್ನೆಯಿಂದ ಸೊನೆಯ ತಲೆಮೇಲೆ ಕುಕ್ಕಿದಳು. ಆ ಮಟ್ಟಿಗೆ ಹುಡುಗಿಯು ಕುಕ್ಕರಿಸಿಕೊಂಡು ಬಿಟ್ಟಳು. ಆಗ ಪಾರ್ವತಮ್ಮ ಬಂದು,- ಹೀಗೆ ಹೊಡೆ ಯುತಾರೆಯೇನೆ, ತಿರು ? ಬೇಕೆಂದು ಅವಳು ಅನ್ನಕ್ಕೆ ಉಪ್ಪುಹಾಕುತಾಳೆಯೆ ? ಯಾಕೆ ಅವಳನ್ನು ಹೀಗೆ ಹೊಡೆದು ಕೊಲ್ಲುತೀಯೆ ? ಎಲ್ಲಿಯಾದರೂ ಪುಣ್ಯವಂತರ ಮನೆಯನ್ನು ಸೇರಿಕೊಂಡು ಬದುಕಿಕೊಳ್ಳುತ್ತಾ ಇದ್ದ ಹೆಂಣನ್ನು ತಂದದ್ದು ಅದನ್ನು ಜೀವಸಹಿತ ಕೊಲ್ಲುವುದಕ್ಕಾಯಿತು, ಹೀಗೆಂದು ಆ ಮುದುಕಿಯು ಸೀತೆಯನ್ನು ಆ ಮಾರಿಯ ಎದುರಿನಿಂದ ಒಂದು ಪಕ್ಕಕ್ಕೆ ಎಳೆದುಕೊಂಡಳು. ಸಿ(ತನ್ನು ರಿ ಊ ಟವೇ ಮಾಡಮಡಿಸೀರೆಯನ್ನು ಉಟ್ಟುಕೊಂಡು ಕೋ ಣೆಯಲ್ಲಿಯೇ ಕೂತುಕೊಂಡಳು. ಅತ್ತೆಯ ತಲೆಮೇಲೆ ಹೊಡೆದ ಕೆಟ್ಟಿನಿಂದಲೂ ಕೈಮೇಲಿನ ಬರೆಯ ಉರಿಯಿಂದ ಆ ಹುಡುಗಿಗೆ ಜ್ವರ ಬಂತು. ನೆಲದಮೇಲೆಯೇ ರಾತ್ರಿಯೆಲ್ಲಾ ಮಲಗಿದ್ದಳು, ಕೊಳ್ಳಿ ಬರೆಯ ಗಾಯ ಕೀತುಕೊಂಡು ಕ