ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೭ ಮಾಡಿದ್ದುಣೋ ಮಹಾರಾಯ, ಚಿಕೆ, ದುಃಖ, ಈ ಮಧ್ಯೆ ಅತ್ತೆಯ ಭಯ ಇವೆಲ್ಲಾ ಸೇರಿ ಕೊಂಡು ಮುಖ ಒಂದು ಬಗೆಯಾಯಿತು. ಕಂಣಿನಲ್ಲಿ ನೀ ರುಬಂತು. ಹಾಕಿದ್ದ ಬಾಗಿಲಕಡೆ ಹಿಂದೆ ತಿರುಗಿ ನೋಡುತಾ ನೋಡುತಾ ಕಂಣನ್ನು ಒರಿಸಿಕೊಳ್ಳುತಾ ಸುನ್ನು ನಾದಳು, ಮಹಾದೇವನು ಈ ಗಾಯವಾಗುವುದಕ್ಕೆ ಏನೋ ಹೆಚಾ ದ ಕಾರಣವಿರಬೇಕು, ತನ್ನ ಹೆಂಡತಿಯು ನಾಚಿಕೆಯಿಂದ ಭ ಯದಿಂದಲೂ ಸುಮ್ಮನಾಗಿದಾಳೆ, ಎಂದು ಹೆಚ್ಚು ಮಾತನ್ನಾ ಡದೆ ತಾನೂ ಮನವನ್ನು ಧರಿಸಿದನು. ಮಾರನೇ ದಿವಸ ಗಂಡಸರು ಯಾರೂ ಮನೆಯಲ್ಲಿಲ್ಲದಿರುವಾಗ ಮೂರನೇ ಜಾ ವದಲ್ಲಿ ನಿಮ್ಮ ಮೈ ನು- ಎಲೆ ಸೀತೆ, ಅದೇನೆ ನಿನ್ನೆ ರಾತ್ರೆ ಚಿಕ್ಕ ಮನೆಯಲ್ಲಿ ಬಹುವಾಗಿ ಮಾತನಾಡುತಿದೆ ? ಗುಸುಗುಸ ಪಿಸಿಪಿಸಿ ಬಹು ಹೆಚ್ಚಾಗಿತ್ತು, ಯಾವ ಕೋತೀ ಸಾಧನೆಮಾ ಡುವುದಕ್ಕೆ ಗಂಡಹೆಂಡಿರಿಬ್ಬರೂ ಮಾತನಾಡಿದರೆ ? ಇಬ್ಬರೂ ಸೇರಿ ನನ್ನನ್ನು ಮನೆ ಬಿಟ್ಟು ದಾಟಿಸಿಬಿಡಿ. ಅದು ಒಂದೇ ನನಗೆ ಆಗಬೇಕಾದ ಪ್ರಾಯಶ್ಚಿತ, ಅದೂ ಆಗಲಿ; ಆ ಹೆಂ ಣನ್ನೂ ಕರೆದುಕೊಂಡು ಹೋಗಿ ಎಲ್ಲಿಯಾದರೂ ಮುಳುಗಿಕೊ೦ ಡು ಸಾಯುತ್ತೇನೆ. ನಾನು ಈ ಮನೆಯಲ್ಲಿರುವುದರಿಂದ ಹೌ ದೋ ಅಲ್ಲವೋ ಇನ್ನೂವೆ ? ಆಪಾಪದ ಕೇಡು ಉಂಟೆ ? ನಾನೂ ಕಂಡದ್ದರಲ್ಲಿಯ ಕಂಡೆ, ಇಂಥಾ ಗಂಡಹೆಂಡಿರನ್ನು ಎಲ್ಲಿಯೂ ನೋಡಲಿಲ್ಲ. ಈ ತಾಟಕಿ ಸುಮ್ಮನೆ ಇರತಕ್ಕೆ ನಳೆ ? ಗಂಡನಿಗೆ ಎಲ್ಲಾ ಬೋಧನೆಯನ್ನೂ ಮಾಡಿ ಮಾಡಿ ತನ್ನಂತೆ ಮಾಡಿಕೊಂಡು ಅವನನ್ನು ಒಲಿಸಿಕೊಂಡಿದಾಳೆ. ಅ