ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಮಾಡಿದ್ದುಣೋ ಮಹಾರಾಯ, ಟಾಗಬೇಕು. ಅರಿಯದ ಮಗುವಿನಮೇಲೆಯೇ ನಿನ್ನ ಚೋಡಿ ? ಅವಳೇನು ನಿನ್ನ ತಲೆಯಮೇಲೆ ಕಲ್ಲ ಎತ್ತಿಹಾಕಿರುವುದು. ಇವತ್ತು ಆದ್ದೆಲ್ಲಾ ಆಗಲಿ, ನಿ ನಿಂದ ನನಗೆ ಎತ್ತಿಬರುವ ಮಾಗಡೀಪುಣಿ ಇಲ್ಲದಿದ್ದ ರೂ ಚಿಂತೆಯಿಲ್ಲ. ಇಂದು ಅದರಮೇಲೆ ಹೇಳಿದೆ ನಾಳೆ ನನ್ನ ಮೇಲೆಯೇ ಹೇಳುತೀಯೆ. ನೀನು ಯಾ ತಕ್ಕೆ ಹೇನುತೀಯೆ ? ಇಲ್ಲಿ ಬಾರೆ ಇಲ್ಲಿ, ಮಾಡಿದ ಮಾಡಿ ಮನದಲ್ಲಿ ಕೂತೆ ಎಂತ, ಆಡುವನಾತ ಆಡಿ ಹೊರಹೊರಗೇ ತಿರುಗುತೀಯೆ. ಅವರು ಬರ ಲಿ ಮನೆಗೆ. ಇಲ್ಲಿ ನಾನು ಇದೊಂದು ಇಲ್ಲ ನೀನು ಇದೆ ಹೊಂದು. ಸೀತ - ( ಅತ್ತೆ ಎದುರಿಗೆ ಬಂದು ನಿಂತು ) ಅನ್ನು ಯಾವ ಮಾತನ್ನೂ ಆಡಲಿಲ್ಲಮ್ಮ, ಸದಾ- (ಹೊರಗಿನಿಂದ ಮನೆಗೆಬಂದು) ಇದೇನು ನಮ್ಮ ಮನೆ ಕೂಗಾಟಕ್ಕೆ ಕೊನೆಮಿತಿಯೇ ಇಲ್ಲವಲ್ಲ ? ತಿನ್ನು-ಅಲ್ಲ, ನನ್ನ ಸಾತಿ ಅದಿನ ರಾತ್ರೆ ಅನ್ನಕ್ಕೆ ಉಪ್ಪ ಹಾಕಿದಳು ಎಂದು ಹೇಳಿದಾಳಲ್ಲಾ ನಿನ್ನ ಸೊಸೆ? ಸಾತೀನೇ ಕೇಳಿ ಬೇಕಾದರೆ, ನಾನಂತು ಕೆಟ್ಟವಳು, ಯಾರಿಗೂ ಬೇಡವಾದವಳು. ಸಾತಿ- ಹೌದಪ್ಪ ನಿನ್ನೆ ರಾತ್ರೆ ಅತ್ತಿಗೆ ಗಂಡನ ಸಂಗಡ ಹೇಳುತಾ ಇದ್ದಳು. ಸದಾ ನಿನಗೆ ಹೇಗೆ ತಿಳಿಯಿತು ?