ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಮಾಡಿದ್ದು ಣೋ ಮಹಾರಾಯ, ಲು ತಪ್ಪು. ಹಿಂದೆಮುಂದೆ ಆಲೋಚಿಸದೆ ಮಾತನಾಡ ಬಾರದು, ಆಡೋರು ಇಬ್ಬರು ನೋಡೋರು ಹಲ ವುಮಂದಿ. ಈ ಅವಿವೇಕದ ಮಾತನ್ನು ಕೇಳಿ ನೆರೆ ಹೊರೆಯವರು ಏನೆಂದಾರು ? ಸುಮ್ಮನಿರಿ. ಹೋ ಗಲಿ, ನಾಚಿಗೆ ಕೇಡು. ಯಾರಾದರೂ ಕೇಳಿದರೆ ನಕ್ಕಾರು. ತಿಮ್ಮ-ನಗೂಹಾಗೆಯೇ ಆಯಿತು ನನ್ನ ಬಾಳು. ನನ್ನ ತಲೆ ಗೂ ನನ್ನ ಮಗುವಿನ ತಲೆಗೂ ಮಗಳ ಬೂದಿ ಹು ಯಿದು ಆಚೆಗೆ ದಾಟಿಸಿಯೇನೆ, ಎಂದು ಕಾದುಕೊಂ ಡಿದೀರಿ, ತಿಮ್ಮ ಮೈ ನು ಹೀಗೆ ಎನ್ನು ತಾ ಇರುವಾಗ ದೀಕ್ಷಿತನು ಈ ಗಲಭೆಗೆ ಅಸಹ್ಯ ಪಟ್ಟುಕೊಂಡು ಮನೆಯಲ್ಲಿರದೆ ಪುನಃ ಹೊರಕ್ಕೆ ಹೋದನು. ಗಂಡನು ನ್ಯಾಯವಾಗಿ ಹೇಳಿದನೆ ಸೊಸೆಯನ್ನು ವಹಿಸಿಕೊಂಡು ಹೇಳಿದನೆ ಎಂದು ಯೋಚಿಸಿ ಕೊಳ್ಳದೆ, ತಿಮ್ಮನ್ನು ನು ಆ ದಿನವೆಲ್ಲಾ ಮನೆಯಲ್ಲಿ ವಿಶೇಷ ವಾಗಿ ಆರ್ಭಟಿಸಿ, ಮನೆಯ ಜನರೆಲ್ಲರನ್ನೂ ಬೈದು, ಅಂದು, ಹಣೆಹಣೆ ಚೆಚ್ಚಿಕೊಂಡು ರೋಷಾವೇಶದಲ್ಲಿ ತಲೆಯನ್ನೆಲ್ಲಾ ಕೆದರಿಕೊಂಡು ಹೋಗಿ ಒಂದು ಮೂಲೆಯಲ್ಲಿ ಮಲಗಿಕೊಂ ಡಳು. ಊಟಕ್ಕೆ ಏಳಲಿಲ್ಲ. ಸೀತಮ್ಮನು ರಾತ್ರಿ ಎಲ್ಲರಿಗೂ ಅಡಿಗೆಮಾಡಿ ಬಡಿಸಿ ಅತ್ತೆ ಊಟಮಾಡಲಿಲ್ಲವಾದಕಾರಣ ತಾ ನೂ ಊಟಾ ಮಾಡದೆ ನುಡಿಸೀರೆಯನ್ನು ಉಟ್ಟುಕೊಂಡು ಕೂತುಕೂತು ಸಾಕಾಗಿ, ಅಡಿಗೇ ಒಲೇಮುಂದೆಯೇ ನೆಲದ