ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಮಾಡಿದ್ದು ಮಹಾರಾಯ ಯಾಕೆ ಬೆರಿಸಿದೆ ? ದೇವರ ನಿವೇದನ ಮಾಡಿ ದಾನ ಕೊಡ ಬೇಕೆಂದು ಮಾವಯ್ಯ ಹೇಳಿದಾರೆ, ಎಲ್ಲವನ್ನೂ ಮಡಿಯಲ್ಲಿ ಮಾಡಬೇಕಮ್ಮ , ಎಂದಳು. ನಾತಿಯು- ಹಾಗಾದರೆ ನೀನೇ ಅಡಿಗೆ ಮಾಡಿಕೊ ಎನ್ನುತಾ ಹೊರಕ್ಕೆ ಹೊರಟುಹೋ ದಳು. ಸೀತೆಯು ಅಡಿಗೆಯನ್ನೂ ಭಕ್ಷವನ್ನೂ ಮಾಡಿ ರೈಸಿದಳು. ಗಂಡಸರೆಲ್ಲಾ ನಡೀ ಉಟ್ಟು ಆಕಗಳನ್ನೂ ತೀರಿಸಿಕೊಂಡು ಊಟಕ್ಕೆ ಎಲೆ ಹಾಕಿಕೊಂಡರು. ಮಹಾ ದೇವನು ದೇವರಪೂಟೆ ಮೊದಲಾದ ನ್ನು ಪೂರೈಸಿದನು. ಸದಾಶಿನದೀಕ್ಷಿತನು ಮೋದಕದಾನವನ್ನು ವಿನಾಯಕ ಪ್ರೀತ್ಯ ರ್ಥವಾಗಿ ಕೊಟ್ಟು ಎಡೆಮಾಡಿ ಬ್ರಾಹ್ಮಣರನ್ನು ಕೂರಿಸಿ ಎಲ್ಲವನ್ನೂ ಬಡಿಸಿದ ತರುವಾಯ ಎಲ್ಲರಿಗೂ ಆಪೋಶನವನ್ನು ಹಾಕಿ ತಾನೂ ಊಟಕ್ಕೆ ಕೂತುಕೊಂಡನು. ಅಡಿಗೆ ಬಹು ಚೆನ್ನಾಗಿದೆ ಎಂದು ಹೇಳುತಾ ಎಲ್ಲರೂ ಭೋಜನ ಮಾಡು ತಿದ್ದರು. ಆಗ ಸೀತೆಯು ಕರಿಗಡಬನ್ನು ತಂದು ಎಲ್ಲರಿ ಗೂ ಬಡಿಸಿದಳು. ಊಟಕ್ಕೆ ಕೂತಿದ್ದವರು ಅದನ್ನು ಕಚ್ಚಿ ಅಗಿಯಲು ಆರಂಭಿಸಿದರು. ಎಲ್ಲರ ಹಲ್ಲ ಗರಗರಗುಟ್ಟಿ ಹೋಯಿತು. ಹೂರಣದಲ್ಲಿ ತುಂಬಾ ಮರಳು ಬೆರೆದಿತ್ತು. ಅದನ್ನು ತಿನ್ನುವುದು ಎಲ್ಲರಿಗೂ ಅಸಾಧ್ಯವಾಯಿತು. ವಿಶಿ «ರೂ ಕರಿಗಡಬನ್ನು ಚೆಲ್ಲಿಬಿಟ್ಟರು. ಸೀತೆಯ ಸೋದರ ಮಾವನೂ ಆ ದಿವಸ ಊಟಕ್ಕೆ ಕೂತಿದ್ದನು. ಆತನುಏನು ಸೀತಮ್ಮ, ಇಷ್ಟೊಂದು ಮರಳನ್ನು ಹನುಮಂತನ ಕೈಯಲ್ಲಿ ಸಮುದ್ರದಿಂದಲೇ ತರಿಸಿದೆಯ ? ಎಂದು ಕುಚೇ,