ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩೭ ಮಾಡಿದ್ದುಣ್ಣೆ ಮಹಾರಾಯ, ವ್ಯವಾಗಿ ಮಾತನಾಡಿದನು. ಹೂರಣದಮೇಲೆ ಮುಚ್ಚದೆ ತೆಗೆದು ಇರಿಸಿದ್ದೆಯ ? ಮಂಣು ಏನಾದರೂ ಉದುರಿತೆ ? ಇಷ್ಟು ಮರಳು ಇರುವುದಕ್ಕೆ ಕಾರಣವೇನು ಸೀತಮ್ಮ ? ಎಂದು ಮಾವನವರು ಕೇಳಿದರು. ಆಗ ಯಾನ ಮಾತಿಗೂ ಕುಂದಣದ ಬಾಯಿ ಓಡು ಮುಂದೆಮುಂದೆ ಎಂದು ಸಾತಿಯು ಅಪ್ಪಾ ಹಾಗಲ್ಲ, ಇಳಿಗೆ ಮಣೆಯಲ್ಲಿ ಕಾಯತುರಿ ಇರಿಸಿದ್ದಳು, ಅತ್ತಿಗೆ ಅದನ್ನು ಮರಗಿಗೆ ಹಾಕುವಾಗ ಅದೆಲ್ಲಾ ಕೆಳಗೆ ಚೆಲ್ಲಿ ಹೋಯಿತು. ಉಸಗರಣೆ ತೊಳೆಯುವುದಕ್ಕೆ ಸಂಣನರಳು ಅಲ್ಲಿ ತಂದು ಹಾಕಿತ್ತು. ಅದಕ್ಕೆ ಕಾಯಿತುರಿ ಬಿದ್ದುಬಿಟ್ಟಿತು. ಅದನ್ನು ಮೇಲೆಮೇಲೆಯೇ ಬವರಿಬವರಿ ಎತ್ತಿಕೊಂಡು ಬೆಲ್ಯಾ ಹಾಕಿ ಬೆರೆಯಿಸಿದಳು. ಬೇಡಕಣೆ ಮರಳು ಇದೆ ಎಂದು ಹೇಳಿದೆ, ಅವಳು ನನ್ನನ್ನು ಅಟ್ಟಿಕೊಂಡಳು, ಹೀಗೆ ಹೇಳಿ ದಳು. ಆಗ ಸದಾಶಿವದೀಕ್ಷಿತನು-ಆ ಹಾಳ ಕಾಯಿತುರಿಹೋದ ರೆ ಹೋಯಿತು ಬೇರೆಕಾಯಿ ಒಡೆದು ತುರಿಯಬಾರದಾಗಿತ್ತೆ ? ಎಂದು ಬಹಳ ಅಸಮಾಧಾನ ಪಟ್ಟು ಕೊಂಡನು. ಆಗ ಸೀತ ಮೃ ನು ಏನ ಮಾತನಾಡಿಯಾಳು ? ತಲೆ ಬಗ್ಗಿಸಿಕೊಂಡು ಗೋಡೆಕಡೆ ಮುಖವನ್ನು ಮಾಡಿಕೊಂಡು ಸುಮ್ಮನೆ ನಿಂತು ಕೊಂಡು ಇದ್ದಳು. ಅತ್ತೆ ಇನ್ನೇನು ಶಿಕ್ಷೆ ಮಾಡುತಾಳೊ ಎಂಬ ಹೆದರಿಕೆಯಿಂದ ಯೋಚಿಸುತಿದ್ದಳು. ಹಾಗೆ ಎಂದಹಾ ಗೆಯೇ ಹಗರಣಗಾತಿಯಾದ ತಿಮ್ಮಮ್ಮ ಕೋಣೆಗೆಬಂದು ಸೊಸೆಯನ್ನು ನೋಡಿ- ಕಾಯಿಹೂರಣಕ್ಕೆ ಮರಳನ್ನು ಬೆರೆ ಯಿಸುವುದಕ್ಕೆ ನಿನಗೆ ಬುದ್ದಿ ಇತ್ತೇ ಇಲ್ಲವೇ ? ಮಾಡಿದ