ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


උතුම් ೧೪೨ ಮಾಡಿದ್ದುಣ್ಣೆ ಮಹಾರಾಯ, ಗಿದಾಳೆ ? ಕೂಗದಹಾಗೆ ಸುಮ್ಮನಿದ್ದು ಆದಿನ ರಾತ್ರೆ ಗಂಡ ನಸಂಗಡ ತನ್ನ ಸೀರೆಗೂ ಒಡವೆಗೂ ಬಂದ ದುರವಸ್ಥೆಯ ನ್ನು ಹೇಳಿ ಕ೦ಣಿನಲ್ಲಿ ನೀರಹಾಕಿದಳು. ಮಹಾದೇವನು ಇ ದೆಲ್ಲವನ್ನೂ ಕೇಳಿ ವ್ಯಸನಸೂಚಕವಾಗಿ ಒಂದೆರಡುಸಾರಿ ಲೋ ಚಗುತಿ, ಯಾವ ಮಾತನ್ನೂ ಆಡದೆ ಸುಮ್ಮನಾದನು. ಅವ ನು ಮನಮಾಡುವುದಕ್ಕೂ ಸಾಧ್ಯವಿರಲಿಲ್ಲ. ಪೂರ್ವ ಕಾಲ ದಲ್ಲಿ ಗಂಡಹೆಂಡಿರು ಎಷ್ಟು ದೊಡ್ಡವರಾಗಿ ಎಷ್ಟು ದಿವಸ ದಿಂದ ಬಾಳಿಕೊಂಡಿದ್ದಾಗ್ಯೂ ಹೆಂಡತಿಯ ಮಾತನ್ನು ಗಂಡ ನೂ ಗಂಡನ ಮಾತನ್ನು ಹೆಂಡತಿಯ ಹಿರಿಯರ ಸಂಗಡ ಆಡುತಿರಲಿಲ್ಲ. ಮೊಟ್ಟಮೊದಲು ನಾಚಿಗೆ, ಎರಡನೆಯದು ಮನೆಯ ಯಜಮಾನರೇ ಎಲ್ಲರ ಯೋಗಕ್ಷೇಮವನ್ನೂ ನೋ ಡಿಕೊಳ್ಳತಕ್ಕವರೆಂಬ ನಿಬಂಧನೆ. ಅಂಥವರಲ್ಲಿ ಹೆಂಡತಿಯ ವಿಷಯವನ್ನು ಕುರಿತು ಗಂಡನಾಗಲಿ ಗಂಡನ ಪ್ರಸ್ತಾಪವನ್ನು ಕುರಿತು ಹೆಂಡತಿಯಾಗಲಿ ಸ್ವತಂತ್ರಿಸಿ ಮಾತನಾಡಿದರೆ ಯಾಜ ಮಾನ್ಯದ ಬಿಗಿ ಕಡಿಮೆಯಾಗಿದೆ ಎಂಬಹಾಗೆ ಆಗಬಹುದು. ಆದಕಾರಣ ತಂದೆಯಲ್ಲಿ ಈ ಸಂಗತಿಯನ್ನು ಕುರಿತು ಮಾತ ನಾಡುವುದು ಪುರಾವೆಗೂ ಕಡಮೆ. ಇದಕ್ಕೆಲ್ಲಾ ವಿಪರೀತ ವಾಗಿ ಅರ್ಥವನ್ನು ಕಲ್ಪಿಸಿ ಆಕ್ಷೇಪಣೆ ಮಾಡತಕ್ಕ ಚಿಕ್ಕ ಮೃ ನ ಭಯವು ಎಲ್ಲಕ್ಕಿಂತ ಹೆಚ್ಚಾದ್ದು. ಹೀಗೆ ನಾ ನಾವಿಧದ ಒಳಸಂಗತಿಗಳು ಇದ್ದ ಕಾರಣ ಬಂದ ಕಷ್ಟಗಳೆ ಲ್ಲವನ್ನೂ ಅನುಭವಿಸಿಯೇ ತೀರಬೇಕು. ಇಲ್ಲವಾದರೆ ಲೋ