ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಮಾಡಿದ್ದು ಣೋ ಮಹಾರಾಯ, ಏನು ಸಾಧಾರಣಳೆ ? ಅದೆಲ್ಲಾ ಹೇಳಿದರೆ ಚೆನ್ನಿಲ್ಲ. ಹೀಗಲ್ಲ ಹಾಗೆ ಎಂದರೆ ತೊ೦೯ರ ರಾಕ್ಷಸಿಯ ಹಾಗೆ ಬರುತಾಳೆ. ಎತ್ತಲಾಗಾದರೂ ಹಾಳಾಗಿ ಹೋಗಲಿ, ನನ್ನ ತಾಯಿ ; ಅವಳ ಗೋಜೇ ನನಗೆಬೇಡ, ಹೀಗೆಂದು ಅನೇಕ ವಿಧವಾಗಿ ಅನನ್ನು ಯವಾಗಿ ಮಾತನಾಡುತಿದ್ದಳು. ೯ ನೇ ಅ ಧ್ಯಾ ಯ. ಸೀತಮ್ಮನು ಈ ಹುರುಪತವನ್ನು ಸಹಿಸಿಕೊಂಡು ಲೇಶ ವೂ ಪಾತಿವ್ರತ್ಯಧರ್ಮಕ್ಕೆ ಲೋಪವಿಲ್ಲದಂತೆ ನಡೆದುಕೊಳ್ಳುತಿ ದ್ದಳು. ಹೀಗಿರುವಲ್ಲಿ ಪ್ರತಿದಿನವೂ ರಾ ಕಾಲದಲ್ಲಿ ಆವೂರ ಈಶ್ವರನ ಗುಡಿಯಲ್ಲಿ ಸದಾಶಿವದೀಕ್ಷಿತನು ಗ್ರಾಮಸ್ಥರ ಅಪೇ ಕ್ಷೆಯಂತೆ ಪುರಾಣವನ್ನು ಹೇಳುತ್ತಿದ್ದನು. ಸ್ವತಃ ಪಂಡಿತ, ಕೇವ ಲ ಸ್ವಧರ್ಮನಿರತ, ಸಾತ್ತೀಕ, ಅನೇಕ ರಹಸ್ಯಗಳನ್ನು ತಿಳಿದ ಅಂತರ್ಮುಖಿ; ಇಂಧಾ ಪುರುಷನು ಹೇಳುವ ಪುರಾಣವು ಬಹು ಮಟ್ಟಿಗೆ ಪಂಡಿತರಿಗೂ ಪಾಮರರಿಗೂ ರಂಜನೆಯಾಗಿ ಯೇ ಇರುತಿತ್ತು. ಇದನ್ನು ಕೇಳುವುದಕ್ಕೆ ಸಮಾಸ ಗ್ರಾಮದ ಜನರೂ ಸಹಿತವಾಗಿ ಬರುತಿದ್ದರು. ಸೀತನ್ನು ಒಬ್ಬಳು ಹೊರತು ಉಳಿದ ಹೆಂಗಸರೆಲ್ಲಾ ಪುರಾಣವನ್ನು ಕೇ ಳುವುದಕ್ಕೆ ಪ್ರತಿನಿತ್ಯವೂ ಹೋಗುತಿದ್ದರು. ಒಂದಾನೊಂದು ದಿವಸ ಪುರಾಣದಲ್ಲಿ ಪತಿವ್ರತೆಯರ ಮಹತ್ತನ್ನೇ ನಶೇಷವಾಗಿ ಹೇಳಿದರು. ಮಾರನೇ ದಿವಸ ದ್ವಾದಶಿಯಾದ್ದರಿಂದ ಪುರಾಣ