ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೨ ಮಾಡಿದ್ದುಣೋ ಮಹಾರಾಯ, ಆಗಿದ್ದರು ಎಂತ ಹೇಳುವುದು ಹೇಗೆ ? ಯಾವಾಗಲೂ ಒಳ್ಳೆ ಯವರೂ ಉಂಟು, ಕೆಟ್ಟವರೂ ಅಂದ, ನೋಡು ಭಾ ಗೀರಥಿ, ನನ್ನ ಅಮ್ಮ ಇದ್ದಳು. ಅವಳು ಯಾರಿಗೆ ಕಡ ಮೆಯಾಗಿದಳು ? ನೀನೂ ಬಲೆಯಷ್ಟೆ ? ಎಂದಳು. ಆಗ ಭಾಗೀರಥಮ್ಮ ನು- ಅಯ್ಯೋ ನಾನು ಅರಿಯೆನೆ ಅರುಂದ ಮೈ ನವರನ್ನು ? ಬೆಂಕಿಯಂಥಾ ಹೆಂಗಸು, ಇನ್ನು ಅಂಥವರ ನ್ನು ಹುಟ್ಟಿದವರಲ್ಲಿಯೂ ಕಾಣೆ ಬೆಳೆಯುವದರಲ್ಲಿಯೂ ಕಾಣೆ, ಎಂಬದಾಗಿ ಹೇಳಿದಳು. ಪುನಃ ವೆಂಕಮ್ಮ ನು ಅರುಂದನ್ನು ನ ಕಥೆಯನ್ನು ಹೇಳಿದ್ದು ಹೇಗೆಂದರೆ:- - ನನ್ನ ಅಮ್ಮನ ಹೆಸರು ಅರುಂದಮ್ಮ ಎನ್ನುವರು. ಅರಿಯದವರು ಅರವಿಂದನ್ನು ಎನ್ನುತಿದ್ದರು. ನನ್ನ ಹೆತ್ತ ಯ್ಯನು ಹೇಳುತಿದ್ದರು. ನಾವೆಲ್ಲ ಹುಡುಗರು. ನಮ್ಮ ನ್ನು ಕೂರಿಸಿಕೊಂಡು ಪ್ರಸ್ತಾಪ ಬಂದಾಗ ಹಳೇ ಕಥೆಯನ್ನೆಲ್ಲಾ ಹೇಳುತಿದ್ದರು. ನನ್ನ ಅಮ್ಮನ ಚಾತಕವನ್ನು ನೋಡಿ ಅ ವಳಿಗೆ ಅರುಂಧತಿ ಎಂಬ ಹೆಸರು ಸಲ್ಲುವುದು ಎಂದರಂತೆ. ನಾಮಕರಣದಲ್ಲಿಯೂ ಅದೇ ಹೆಸರನ್ನೇ ಇಟ್ಟರಂತೆ. ಅವಳ ನ್ನು ಅರುಂಧತಿಯನ್ನು ಎಂದು ಕರೆಯಲಾರದೆ ಎಲ್ಲರೂ ಅ ರುಂದಮ್ಮ ಎಂದು ಕರೆಯುತಿದ್ದರು. ಅವಳು ಹುಟ್ಟಿದ ನಕ್ಷ ತ್ರದ ಫಲದಿಂದ ಅವಳಿಗೆ ಈ ಹೆಸರನ್ನು ಇಟ್ಟರಂತೆ. ನ ಅಮ್ಮ ನು ಬಾಲ್ಯದಿಂದಲೂ ದೇವರು ಹಿರಿಯರು ಗುರು ಗಳು ಇವರಲ್ಲಿ ಬಹು ಭಕ್ತಿಯನ್ನು ಇರಿಸಿಕೊಂಡಿದ್ದಳು. ಈ ಭಕ್ತಿ ಅವಳು ಸಾಯುವವರೆಗೂ ಇತ್ತು. ತನಗೆ ಒಳ್ಳೆ