ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫ ಮಾಡಿದ್ದು ಣೋ ಮಹಾರಾಯ, ಹುಂಡಾಗಿ ಎರಡು ಪಾದಗಳೂ ಕೊಳೆತು , ಹುಳುಬಿದ್ದು ಸಾಯಂಕಾಲ ಮಳೆಸಹಿತ ಕಳಚಿಕೊಂಡು ಒಂದುಪಾದ ಬಿದೆ ಹೋಯಿತು. ಆ ರಾತ್ರೆಯ ಗೊವಾಲನಿಗೆ ರಣಸನ್ನಿಯಾಗಿ ನಾಲಿಗೆ ಒಳಕ್ಕೆ ಸೇರಿಕೊಂಡು ಹೋಯಿ ತು. ವೈದ್ಯರಿಗೆ ತೋರಿಸಬೇಕೆಂದು ಅವನನ್ನು ಗಾಡಿಯ ಮೇಲೆ ಹಾಕಿಕೊಂಡು ಕರೆದುಕೊಂಡು ಹೋಗುತ್ತಿರುವಾಗ ರಾಮಸಮುದ್ರ ಬಿಟ್ಟು ಚಾಮರಾಜನಗರಕ್ಕೆ ಹೋಗುವ ಮಧ್ಯ ಮಾರ್ಗದಲ್ಲಿ ಸಂಕಟ ಹೆಚ್ಚಾಗಿ ಗಾಡೀಮೇಲೆಯೇ ಗೋಪಾಲ ನಿಗೆ ಪ್ರಾಣಹೋಯಿತು. ಇನ್ನೇನು ದೃಷ್ಟಾಂತಬೇಕು ? ಇದೂ ಅಲ್ಲದೆ ಇನ್ನೊಂದು ವಿಚಿತ್ರ ನಡೆಯಿತು. ನಮ್ಮ ಗದ್ದೆ ಮಾಡುತಿದ್ದ ವರದನೆಂಬ ಶೂದ್ರನು ಒಂದುಸಾರಿ ಎಂದು ಕಂಡಗ ಬತ್ತವನ್ನು ತಂದು ನಮ್ಮ ಮನೆಯಲ್ಲಿ ಅಳೆದು ಹಾಕಿದನು. ನನ್ನ ಮೈ ನೇ ನಿಂತುಕೊಂಡು ಅಳಸಿಕೊಂಡ ಳು. ನನ್ನ ಅಪ್ಪ ಆಗ ಊರಲ್ಲಿರಲಿಲ್ಲ. ನಂಜನಗೂಡಿಗೆ ಹೋಗಿದ್ದರು. ಅವರು ಬಂದಮೇಲೆ ಉಳಿದ ಹನ್ನೆರಡು ಕಂಡಗವನ್ನೂ ತಂದುಕೊಡೆಂದು ಆ ಗೌಡನಿಗೆ ವರಾತುಮಾ ಡಿದರು. ಅದಕ್ಕೆ ಅವನು ಇಪ್ಪತ್ತು ಕಂಡಗವನ್ನೂ ಅಳತೆ ಮಾಡಿ ನನ್ನ ಮನೆಯಲ್ಲಿ ನಮ್ಮ ಅಮ್ಮ ನ ವಶಕ್ಕೆ ಕೊ “ದೇನೆಂದು ಸುಳ್ಳಹೇಳಿದ. ನಮ್ಮ ಹೃನು ಅವನನ್ನು ನಮ್ಮ ಮನೆಗೆ ಕರೆದುತಂದು ನನ್ನು ತಾಯಿಯ ಎದು ರಿಗೆ ಕೇಳಿದರು. ಅವನು ಸ್ವಲ್ಪವೂ ಅಂದೇಶಪಡದೆ, ನಾ ನು ಇಪ್ಪತ್ತು ಕಂಡಗವನ್ನೂ ಅಳತೇಮಾಡಿ ಈ ಹಜಾರದಲ್ಲಿ