ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫ ಮಾಡಿದ್ದುಣೋ ಮಹಾರಾಯ, ರ್ಮೊ ದಾಟನೆ ಮಾಡುವ ಚಾಳಿ ಬರುತಬರುತನ ಹುಟ್ಟು ಗುಣವಾಗುತಾ ಬಂತು. ಆ ಬೃಂದಾವನದ ಬಳಿಗೆ ಜೋಯಿ ಸರ ಮನೆಯಿಂದ ಹೊರಟರೆ ಬೀದಿಯ ಕಡೆ ಬಳಗಾಗಿತ್ತು. ಊರನ್ನು ಸುತ್ತು ಹಾಕಿಕೊಂಡು ಬೆಸ್ತರ ಕೇರಿಯಮೇಲೆ ಹಾಯಿದು ಹೋಗಬೇಕಾಗಿತ್ತು. ಈ ದಾರಿ ಬಹು ದೂರ ವಾಗಿದ್ದ ದೂ ಅಲ್ಲದೆ, ಬೆಸ್ತರ ಮನೆಯ ಮುಂದುಗಡೆ ಒಣ ಗಹಾಕಿರುವ ಕರಿಮಿಾನು ಮೊದಲಾದ್ದು, ಬೀದಿಯ ಲ್ಯಾ ಹರಡಿ ಒಣಗಿಸುತಾ ಇರುವ ದೊಡ್ಡ ದೊಡ್ಡ ಬಲೆಗಳು, ಮಾನಿನ ವಾಸನೆ, ದಾರಿಯಲ್ಲಿ ಸಿಕ್ಕಿದಹಾಗೆ ಕೂತು ಮಾಡಿದ್ದ ಹೇಸಿಗೆ, ಬೀದಿಯಲ್ಲಾ ನನನ್ನು ಬಂದಹಾಗೆ ಚೆಲ್ಲಿ ರುವ ಕಸ, ಅಲ್ಲಲ್ಲಿ ಜನರು ತಂತಮ್ಮ ಮನೆಮುಂದೆ ಹಾಕಿರುವ ಗೊಬ್ಬರದ ಗುಡ್ಡೆಗಳು, ಒಂದೊಂದು ಮನೆಯಂ ದಲೂ ಉದ್ದಕ್ಕೂ ಬೀದಿಯಲ್ಲಿ ಹರಿಯುವ ಬಚ್ಚೆ ನೀರಿನ ಕೊಚ್ಚೆ, ದನಗಳ ಸಗಣಿ, ಕಸದ ಹುಲ್ಲು, ದನಗಳ ಹಳೇ ಗಂಜಳವನ್ನು ತಂದುತಂದು ಅಲ್ಲಲ್ಲಿ ಚೆಲ್ಲಿರುವ ದನದ ಹಳೇಗಂಜ ೪ : ಇದೇ ಮೊದಲಾದ ಕೊಳಚೆ ಬೀದಿಗೆ ಮುಖವನ್ನು ಹಾಕದ ಹಾಗೆ ಅಸಹ್ಯವಾಗಿತ್ತು. ಅದರಲ್ಲಿಯೂ ಮಡಿ ಉಟ್ಟುಕೊಂಡು ಹೋಗುವುದು ಸಾಧ್ಯವೇ ಇಲ್ಲ. ಸೀತಮ್ಮ ನ ಸ ಭಾವಕ್ಕೂ ನೇಮಕೂ, ಆ ಪ್ರೀತಿ ಮತ್ತೂ ಹೇಸಿಗೆಯಾಗಿತ್ತು. ಇದೂ ಅಲ್ಲದೆ ಆ ದಾರಿ ದೂರವಾದು, ಮತ್ತು ಕೊಲ್ಲಾಪುರದ ಮಹಾಲಕ್ಷ್ಮಿಯ ಗುಡಿಗೆ ಸಮಾಜದಲ್ಲಿ ಹೋಗುತಿತ್ತು. ಆ ಗುಡಿಯ ಕೈಸಾಲೆಯಲ್ಲಿ, ಜಾಣಗಾರರು, ಭಂಗಿ ಕುಡ Y