ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೯ ಮಾಡಿದ್ದುಣೋ ಮಹಾರಾಯ, ಣುಮಗಳು, ಗಂಡಿಗೆ ಗಂಡುಮಗ, ಮುತ್ತಿನಹಾಗಿರುವ ಮೊ ಮೃ ಗು ; ಮಗ ಬಲಮಗನಾದರೂ ಯಾವುದೊಂದಕ್ಕೂ ಚಿಕ್ಕ ನ್ನ ಚಿಕ್ಕಮ್ಮ ಎಂದುಕೊಂಡು, ಉಗುಳು ಮಾರದೆ ಇದಾನೆ. ಆ “ಸೊಸೆಯ ಹಾಗೇ, ಅಂಧಾಸೊಸೆ ಎಷ್ಟು ವರುಷ ತಪಸ್ಸು ಮಾಡಿದವರಿಗೂ ಇಲ್ಲ. ಆ ಜಾಣತನವೋ ಆ ರೂಪೋ, ನಾನು ಯಾವುದು ಎಂದು ಹೇಳಲಿ, ಈ ದಿವಸ ಬೆಳಗ್ಗೆ ಬೃಂದಾವನದ ಪೂಜೆ ಮಾಡಿಕೊಂಡು ಬರುತ್ತಿದ್ದಳು. ನಾನು ಹಿತ್ತಲಬಾಗಿಲಲ್ಲಿ ನಿಂತಿದ್ದೆ, ನಾನು ಏನಹೇಳಲಿ ? ಸಾಕ್ಷಾತ್ ಆದಿಲಕ್ಷ್ಮಿಯಹಾ ಗೆ ಇದ್ದಳು. ಆ ತಲೆಕೂದಲೋ, ಆ ಹಣೆ ಬೈತಲೆಯೋ, ಆ ಕಂಣು ಮಗೋ, ಆ ಹಲ್ಲು ಬಾಯಿದೆರೆಯೋ, ಆ ಕೆನ್ನೆ ಸನ್ನೆ ಗಳೊ, ಕುಂದಣದ ತಗಡಿನಹಾಗಿರುವ ಆ ಮೈಬಣ್ಣವೋ, ಪ್ರ ಮಾಣಕ್ಕೆ ಸರಿಯಾಗಿರುವ ಆ ಮೈಸಿರಿಯೋ, ಆ ಗಂಭೀರವಾ ದ ನಡಗೆಯೋ, ಆ ಹಸನ್ನು ಖವೋ, ಆ ಮೃದುವಾದ ಮಾತೋ? ಆ ಸುಗುಣಗಳೊ, ನಾನು ಯಾವುದು ಎಂದು ಹೇಳಲಿ ! ಮ ಹಾರಾಯತಿ ಪೂರಜನ್ಮದಲ್ಲಿ ಏನು ಪುಣ್ಯ ಮಾಡಿದ್ದಳೋ, ಈಗ ಆ ರೂಪು ಆ ಅಕ್ಷಣಗಳೆಲ್ಲಾ ಪ್ರಾಪ್ತವಾಗಿವೆ : ಹೀಗೆಂದು ಆಕೆ ಕೊಂಡಾಡಿದಳು. ಅದಕ್ಕೆ ಹೊಟ್ಟೆಯಲ್ಲಿ ಮೆಣಸಿನಕಾಯಿ ಕಿವಿಚಿದಹಾಗೆ ಆದ ತಿಮ್ಮ ನು~ ಎಷ್ಟಾದರೂ ಪಟ್ಟಣವಾಸ ದವರ ಸಿನ್ನು ಕೊಂಡಾಡಿಸಿಕೊಳ್ಳುತ್ತೆ. ಆದರೇನು, ತೆಗೆ ಸರಿ ಬೃಹ್ಮ, ನೋಡಲಾರೆ. ಸೀತೆಯ ಕೂದಲು ಏನೋ ಒಂದುಬಗೆ ವಂಕಿವಂಕಿಯಾಗಿ ಗುಂಗುರುಗುಂಗುರಾಗಿದೆ. ಎಷ್ಟು ಬಾಚಿದರೂ ಎಷ್ಟು ಎಂಣೇ ತೊಡೆದರೂ ಸಾಲದು, ಹಾಗೆ ಮೆಟ್ಟಿಲಮೆಟ್ಟಿಲಾಗಿ