ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ. ೧೫ ಗಜ ದೂರವಿತ್ತು. ದಿನಚರಿಯಲ್ಲಿಯ ಸೀತಮ್ಮ ನು ಬೃಂದಾ ವನದ ಪೂಜೆಗೆ ಹೋಗಿಬರುವುದು ಗುಡಿಯ ಕೈಸಾಲೆಗೆ ಚೆನ್ನಾಗಿ ಕಾಣಿಸುತಿತ್ತು. ಸೀತಮ್ಮನು ಪೂಜೆಗೆ ಹೋಗಿಬರುವ ಹೊ ತ್ತು ಗೊತ್ತಾಗಿತ್ತು. ಆ ಕಾಲದಲ್ಲಿ ಈ ಪಡ್ಡೆಹುಡುಗರ ಹಾ ವಳಿಯು ಅಮ್ಮನಗುಡಿಯ ಬಳಿಯಲ್ಲಿ ದಿನೇದಿನೇ ವೃದ್ಧಿಯಾ ಗುತ್ತಲೇ ಬಂತು. ಬುದ್ಧಿ ವಿಕಾರಕ್ಕೆ ನೋಟನೇ ಅಂಕದ ಬಾ ಗಿಲಾಗಿದೆ. ಸೀತಮ್ಮ ಹೋಗಿ ಅಲ್ಲಿ ಪೂಜೆಯನ್ನು ತೀರಿಸಿಕೊಂ ಡು ಬರುವಷ್ಟರಲ್ಲಿ ಗುಡಿಯಲ್ಲಿರತಕ್ಕೆ ಎಲ್ಲರಕಂಣ ಆಕಡೆ ಗೇ ತಿರುಗುತಿತ್ತು. ಒಂದು ದಿವಸ ಅಪ್ಪಾಜಿಯು ಗುಡಿಯ ಕೈಸಾಲೆಯಿಂದಲೇ ದೃಷ್ಟಿಸಿ ನೋಡಿದನು. ಕಂಕಣಿಗೆ ತೃಪ್ತಿ ಯಾಗಲಿಲ್ಲ, ದೃಷ್ಟಿ ಅಲ್ಲಿಯೇ ನೆಟ್ಟುಹೋಯಿತು. ಸ್ವಲ್ಪ ಹೊತ್ತಿನಮೇಲೆ ಈಕೆ ದೀಕ್ಷಿತರ ಸೊಸೆಯಲ್ಲವೆ ? ಎಂದನು. ಅಲ್ಲಿದ್ದವರು- ಹವುದು ಎಂದು ಹೇಳಿದರು. ಆಗ ಅವಾಜಿ ಯು- ಒಳ್ಳೆ ಚೆಲುವೆ, ಬಹು ಸುಂದರಿಯಾಗಿದ್ದಾಳೆ. ನಾ ನು ಚೆನ್ನಾಗಿ ನೋಡಿಯೇ ಇರಲಿಲ್ಲ. ಈ ಸೌಂದಯ್ಯದ ವೈಖ ರಿಯನ್ನು ನಾನು ಎಲ್ಲಿಯೂ ಕಾಣಲಿಲ್ಲ ಎಂದನು. ಅಲ್ಲಿ ಇ ದ್ದವರಲ್ಲಿ ಒಬ್ಬನು ಅವಳ ತಲೇಕೂದಲು ಎಷ್ಟು ಸೊಗ ಸಾಗಿದೆ ಎಂದನು. ಇನ್ನೊಬ್ಬನು ಬರೀ ಕೂದಲೇ ಅನ್ನು ಹೇಳತಕ್ಕದ್ದಲ್ಲ, ಆ ಕೂದಲು ಆ ಮುಂದಲೇ ಕುರುಳು ಬೆಳ ಗಿರುವ ಮುಖದ ಮೇಲುಗಡೆ ಮೂಲೆ ಮೂಲೆಯಾಗಿ ಕನಾ ನು ಕಟ್ಟಿ ಬಿಟ್ಟ ಹಾಗೆ ಇದೆ, ಎಂದನು. ಇನ್ನೊಬ್ಬನು- ಆ ಕಂಣು ಆ ಹುಬ್ಬು ಆ ನೋಟ ಇದನ್ನು ಹೋಲುವುದು 24