ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, ೧೯೩ ಇರುವಾಗ ಅವನನ್ನು ದೃಷ್ಟಿಸಿ ಲಜ್ಜೆಯನ್ನು ಕೂಡ ಬಿಟ್ಟು ನೋಡುತಾ, ಪುರುಷ ನೋಡಿದಾಗ ಅವನ ಕಡೆ ತಿರುಗಿ ನೋಡದವಳಂತೆ ಇರುತಾ, ಬೆಡ ನನ್ನು ಬೀರುವುದು, ಮಕ್ಕಳನ್ನು ಎತ್ತಿ ಅತಿಯಾಗಿ ಮುದಾಡುವುದು, ಗಹಗಹಿಸಿ ಹಾಡುವುದು, ನಗುನ ಗುತಾ ಅತಿವಿನಯವಾಗಿ ಮಾತನಾಡುವುದು, ಪರಪು ರುಷರೆದುರಿಗೆ ಅತಿಯಾಗಿ ಸುಳಿದಾಡಿ ಓಡಿಯಾಡುವು ದು, ಇವೇ ಮೊದಲಾದ ಹಲವು ಚರಗಳು ಪುರು ಷನೆಂಬ ಮೃಗಕ್ಕೆ ಬಲಿಯಾಗುವವು. ಪುರುಷನನ್ನು ಕಂಡಾಗ ಚಲಿಸದ ಕಂಣು ಎಷ್ಟು ಸುಂದರವಾದರೂ ಕೇಡಿಲ್ಲ ; ಮಾತಾಡದಬಾಯಿ ಎಷ್ಟು ಲಕ್ಷ ಣವಾಗಿದ್ದರೂ ಬಾಧೆಇಲ್ಲ ; ಚಲನಇಲ್ಲದ ಕೈ ಕಾಲು ಗಳು ಎಷ್ಟು ಚೆನ್ನಾಗಿದ್ದರೂ ಭಯವಿಲ್ಲ. ಚೆನ್ನಾ ಗಿ ಯೋಚಿಸಿ, ಅಂಧಾ ಚರಗಳೇನಾದರೂ ಇವೆಯೆ ಹೇಳಿ, ಬರೀಸೌಂದರವೇ ಕಾರಕಾರಿಯಲ್ಲ. ಉಪಾದ್ರಿ- ನಾನು ಇಷ್ಟೊಂದು ನೋಡಿ ಅರಿಯೆ ಸ್ವಾಮಿ, ಹೀಗೆ ಹುಡುಕಾಡಿಕೊಂಡು ಹೋಗುವುದಕ್ಕೆ ನನ್ನ ಕೈಲಾಗದು. ಅಪ್ಪಾಜಿ ಸಭಾಪಯ್ಯನವರು ಹೇಳುವುದೇನೋ ಪುಸ್ತು ಕದಲ್ಲಿ ಬರೆದಿರುವ ಪ್ರಷಂಷೆಯಾಗಿ ಕಾಣುತ್ತೆ. ಲೋ ಕದಲ್ಲಿ ನಡೆಯೋ ಸಂಗತಿಗಳು ಉಪಾದ್ರು ಹೇಳಿ 25