ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಣೋ ಮಹಾರಾಯ, - ದ್ದು, ಎಷ್ಟೋದಿವಸ ಜೋಯಿಸರ ಮನೇಲೇ ಇದು - ನೋಡಿದವರು, ಅವರಿಗೆ ತಿಳಿಯದೆ ? ಹೀಗೆ ಸಭಾಪತೈಯ್ಯನ ಮಾತಿನಲ್ಲಿ ತಿರಸ್ಕಾರವೂ, ಉ ಪಾದ್ರಿಯು ಮೇಲುಮೇಲೆ ರುಚಿರುಚಿಯಾಗಿ ಆಡಿದ ಮಾತಿ ನಲ್ಲಿ ಅಭಿರುಚಿಯ ಅವಾಜಿಗೆ ಹುಟ್ಟಿತು. ಈ ಮಾತೆಲ್ಲಾ ನಡೆಯುತ್ತಿರುವಾಗಲೇ ಇವನಿಗೆ ಚಿತ್ರ ವಿಕಲವಾಯಿತು, ಅಂಧ ಕಾರ ಕವಿಚಿಕೊಂಡಿತು. ಬುದ್ದಿಗೆ ಮತ್ತೇನೂ ತೋರದೇ ಹೋಯಿತು. ಅಪ್ಪಾಜಿಯು ಯಾವನಾತನ್ನೂ ಆಡದೆ ಸುಮ್ಮ ನೆ ಕೂತುಕೊಂಡನು. ಅಲ್ಲಿದ್ದವರೆಲ್ಲರೂ ಎದ್ದು ಮನೆಗಳಿಗೆ ಹೊರಟರು. ಯಾರೂ ಇಲ್ಲದ್ದನ್ನು ನೋಡಿ ಅವಾಜಿಯು ಉಪಾದ್ರಿಯನ್ನು ಕೂಗಿ ಹಿಂದಕ್ಕೆ ಕರೆದನು ; ಅತ್ತ ಇತ್ಯ ನೋಡಿ ಮತ್ತೆ ಯಾರೂ ಇಲ್ಲದ್ದನ್ನು ಕಂಡು ಉವಾದ್ರೆ ಹಾ ಗಾದರೆ ದೀಕ್ಷಿತರ ಸೊಸೇವಿಚಾರದಲ್ಲಿ ಜನವೇನೋ ಹೊಗಳಿ ಕೊಂಡಾಗೂ ಒಳಗಿನಸ್ಥಿತಿ ಬೇರೆಇಗೆ ಅನ್ನಿ ? ನಾನೇನೋ ಜನ ಹೊಗಳುವುದನ್ನು ನಂಬಿಕೊಂಡಿದ್ದೆ, ಎಂದನು. ಅದಕ್ಕೆ ಉಪಾಧಿಯು- ನಾನೇನೋ ಅವರ ಮನೆಯಲ್ಲಿಯೇ ಇದ್ದು ಮೂರುಹೊತ್ತೂ ನೋಡಿದವನ, ಆ ಹೆಂಣಿಗೂ ಆ ಗಂ ಡಿಗೂ ಈಡೇ ಇಲ್ಲ. ಆ ಮಹಾದೇವ ನನ್ನಲ್ಲಿ ಓದಿ ಬುದ್ಧಿ ವಂತನಾದ ಹೈದ, ಈಗ ನನ್ನ ಕಂಡರೆ ಲಕ್ಷ್ಯವೇ ಇಲ್ಲ. ಈ ಹುಚ್ಚು ಮುರನನ ಆಳಿಕೆಗೆ ಬರತಕ್ಕ ಹೆಂಗಸಲ್ಲ ಅವಳು. ನಾ ನೇನೋ ಮುದುಕನಾದೆ, ಇದೂ ಮಾತ ಹೇಳುತ್ತೇನೆ. ಆ ಹಂ ಣಿಗೆ ಎಲ್ಲಿಯಾದರೂ ಅವರಂಧ ಇವರಂಧ ನಿನ್ನಂಧ ಅಗಡು