ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೩ Y ಮಾಡಿದ್ದು ಸ್ಟೋ ಮಹಾರಾಯ, ಅಗಡುಬೊಮ್ಮ ?” ಎಂದು ಹೇಳಿದ ಒಂದು ಮಾತಿನಿಂದ ತಾ ನು ಸರಿಯಾದ ವರನೆಂದು ಊಹಿಸಿಕೊಂಡನು. ಉಪಾದ್ರಿಯು ಲೋಕಾಭಿರಾಮವಾಗಿ ಆಡಿದನೋ ಅಧವಾ ಬೇಕೆಂದು ಅಪ್ಪಾ ಜಿಯ ಹುಚ್ಚಿಗೆ ಧೂಪಹಾಕುವುದಕ್ಕೆ ಹೇಳಿದನೋ ಗೊತ್ತಾಗ ಲಿಲ್ಲ. ಏವಂಚ ಅಪ್ಪಾಜಿಯು ಅದನ್ನು ತನ್ನ ಸ್ತೋತ್ರವೆಂದು ಅನ್ನಯಿಸಿಕೊಳ್ಳುವುದಕ್ಕೆ ಸಂದರ್ಭ ಸಾಕಾಗಿತ್ತು. ಮನ್ಮಥ ನ ಮಾಯವೆಂಬ ಬಲೆಯು ಒಳಗಿನಕಂಣಿಗೆ ಸರೆಯಾಯಿತು. ಈ ಬಯಕೆ ಕೈಗೂಡುವುದು ಹೇಗೆ ? ಯೋಚಿಸಿಕೊಂಡು ಹೋ ಗುತಾ- ತಿಮ್ಮಮ್ಮ ನು ಮನೆಗೆ ಯಜಮಾನಿ, ಇವಳು ಸೊಸೆ ಯನ್ನು ತನ್ನ ಕೈ ಹಿಡಿಯಲ್ಲಿ ಹಿಡಿದಿದಾಳೆ, ಇದೇ ಮಾರ್ಗವೆಂ ದು ನಿರ್ಧರಿಸಿಕೊಂಡನು. ಇವನಿಗೆ ಹುಟ್ಟಿದ ಈ ವಿಪರೀತ ಬುದ್ದಿಯ ಗೀಳು ಬಲವಾಯಿತು. ದಿನಚರಿಯಲ್ಲಿಯ ರಾತ್ರೆ ಕಾಲದಲ್ಲಿ ಅಮ್ಮ ನಗುಡಿಯ ದೊ ಈ ಮಂಗಳಾರತಿಯ ದೇವರಿಗೆ ಮಾಡತಕ್ಕ ಅಲಂಕಾರವೂ ನೈವೇದ್ಯಕ್ಕೆ ನಾ ಡಿಸಿ, ಬಂದಭ ಕ್ಯಾದಿಗಳಿಗೆ ಪ್ರಸಾದವಾಗಿ ಕೊಡತಕ್ಕ ದಣಿವಾರದ ತರತೀವೂ ಒಂದುದಿವಸಕ್ಕೆ ಒಂದು ದಿನ ಸ ಅಧಿಕವಾಗುತಾ ಬಂತು, ಅನ್ನು ನವರಿಗೆ ಅಲಂಕಾರಮಾಡ ತು ಮೈಸೂರಿನಿಂದ ಜನರು ಬಂದರು. ಮಹಿಷಾಸುರಮರ್ದಿ ನಿ, ಮಹಾ ಕಾಳಿ, ಸೀತಾ ವಾಗೃತಿ, ಸಾವಿತ್ರಿ, ಗಾಯತ್ರಿ, ಸತಿ, ಪಾರತಿ, ರಾಜರಾಜೆಶ್ವರಿ, ತ್ರಿಪುರಸುಂದರಿ, ಗಂಗ, ಇವೇ ಮೊದಲಾಗಿ ಬಗೆಬಗೆಯಾದ ಅ@ಂಕಾರವಾಗುತ್ತಾ ಬಂತು. ಆಗಾಗ್ಗೆ ಉತ್ಸವಗಳ ಮೆರವಣಿಗೆಗಳೂ ನಡಿಯುತ್ತಾ ಬಂದವು.