ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೬ ಮಾಡಿದ್ದು ಕ್ಯೂ ಮಹಾರಾಯ, ಓಶೇಷ ವಾದ ಆಹಾಸದಿಂದ ದೇವರಸೇವೆ ನಡೆಯುವುದೆಂದೂ ಎಲ್ಲರೂ ಅದನ್ನು ಬಂದು ಅಗತ್ಯವಾಗಿ ನೋಡತಕ್ಕದ್ದೆಂದೂ ಆಶೆಹುಟ್ಟುವರೀತಿಯಲ್ಲಿ ಎಲ್ಲಾ ಕಾರಗಳೂ ಜರಗುತಿದ್ದವು. ಇದನ್ನು ನೋಡುವುದಕ್ಕೆ ದೂರದ ಗ್ರಾಮದವರೆಲ್ಲಾ ಬರುತಿ ದರು. ಶತಕಂಠರಾವಣನ ಸಂಹಾರದ ಅಲಂಕಾರವನ್ನೂ ಮೋ ಹಿನೀ ಅಲಂಕಾರವನ್ನೂ ಮಾಡುವ ದಿವಸಗಳ ವಿಜೃಂಭಣೆ ಯು ಇನ್ನೊಂದು ಸಾರಿ ನೋಡಬೇಕೆಂದು ಜನರಿಗೆ ನಿಜವಾಗಿ ಯ ಆಶೆ ಹುಟ್ಟುವಹಾಗೆಯೇ ಇರುತಿತ್ತು. ಮಂಗಳಾರತಿ ಕಾಲಕ್ಕೆ ಅಧಿಕಾರಿಗಳನ್ನೂ ಖ್ಯಾತಿವಂತರಾದ ಪುರುಷರನ್ನೂ ತನಕೊಟ್ಟು, ಕರಿಸುತಿದ್ದ ರು. ಶುಕ್ರವಾರದ ದಿವಸ ಗುಡಿಗೆ ಬರೀಹೆಂಗಸರೇ ಬರಬೇಕೆಂದು ಏರ್ಪಾಡಾಯಿತು. ಜೋಯಿಸರ ಮನೇಹೆಂಗಸರನ್ನು ವಿಶೇಷವಾದ ಮರಾದೆಯಿಂದ ಕರೆದುಕೊಂ ಡು ಹೋಗುವುದು ಕರೆದುತಂದು ಬಿಡುವುದು, ಅವರಿಗೆ ಇತರ ರಿಗಿಂತಲೂ ಹೆಚ್ಚಾಗಿ ತಟ್ಟಿತಟ್ಟೆ ತುಂಬಿ ಹೂವನ್ನೂ ಪಣಿ ವಾರವನ್ನೂ ಪ್ರಸಾದವೆಂದು ಕೊಡುತಾ ಬರುವುದು ಹೀಗೆ ಜರು ಗಿತು. ನವರಾತ್ರೆಯಲ್ಲಿಯ ವರಮಹಾಲಕ್ಷ್ಮಿ ಹಬ್ಬದಲ್ಲಿಯ ಸುವಾಸಿನಿಯರ ಪೂಜೆ ಎಂಬ ನೆವದಿಂದ ಒಳೆಸೀರೆಗಳನ್ನೂ ಕುಪ್ಪುಸಗಳನ್ನೂ ದೀಕ್ಷಿತರ ಕುಟುಂಬಕ್ಕೆ ಕೊಡಲು ಆರಂಭ ವಾಯಿತು. ಮನೆಮನೆ ಗಡಿಯ ಊರೂರು ಗಡಿಯ ಅವಾಜಿ ಯನ್ನು ಪ್ರೋತ್ರ ಮಾಡಲು ಆರಂಭವಾಯಿತು. ಇಷ್ಟೇ ಅಲ್ಲ, ಕುಖ್ಯವಾಗಿ ಒಂದುದಿವಸವೂ ಬಿಡದೆ ಸೀ ತಮ್ಮ ನು ತುಳಸೀಪೂಜೆಗೆ ಹೋಗಿಬರುತಾ ಇದದು ಸರಿಯ