ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ, ಕಿ-ಹಾಗಾದರೆ, ಕಳೆ ಕೊಂಡುಕೊಳ್ಳುತೇನೆ ಮೂರುಕಾಸ ಕೊಡೋ, ಒಂದು ಕಾಸಕೊಡೊ ಹೋಗಲಿ, ಉಪ್ಪರಿಗೆ, ಸಂಗ-ನಾಳೆ ಚಿನಕುರಳಿಕೊಡುತಿವಿನಿ, ಸುಮ್ಮನಿರು ಕಿಟ್ಟಪ್ಪ. ನಿಮ್ಮ ಬಾವನಿಗೆ ಹೇಳಬೇಡ, ಹಾಗೇ ಆಗಲೆಂದು ಕಿಜೋಯಿಸನು ಹೊರಟು ಹೋ ಗಲು, ಸಂಗಂಣನು ತನ್ನೊಳಗೆ ಈ ಜೋಯಿಸರ ಹುಡುಗನ ಎದುರಿಗೆ ಸುಬೇದಾರನನ್ನು ಕಾಣಬಾರದಾಗಿತ್ತು, ಇವನೆದು ರಿಗೆ ೧೦೦ ರೂಪಾಯಿ ಕೊಟ್ಟಿದ್ದು ತಪ್ಪಾಯಿತು. ಸುಬೇದಾ ರನ ಮಗಳು ಆ ಚೆಂದುಳ್ಳಿ ಚೆಲುವೇ ಕೈಗೆ ಸಾದಲಿ ಕೊಟ್ಟಿದ್ದ ಹೆಚ್ಚಾಯಿತು. ಇದನ್ನು ಈ ವೆದ್ದನು ಎಲ್ಲಿಯಾದರೂ ಹೊರಗೆ ಬಿತ್ತಿ ಯಾನೋ ? ಒಂದುವೇಳೆ ಹಾಗೆ ಹೇಳಿದರೂ, ಸುಬೇ ದಾರರು ನನ್ನು ಮಾತಕೇಳುತಾರೆ ಎಂಬ ವಾರೆ ನನಗೆ ಕೆಟ್ಟ ದೂ ಎನ್ನ ಕೂಡದು. ನನ್ನನ್ನು ಕಂಡರೆ ಇತರರು ಹೆದರಿ ಕೊಳ್ಳುವುದಕ್ಕೆ ದಾರಿಯಾಗುತ್ತೆ. ಹೀಗೆಂದುಕೊಳ್ಳುತಾ ಮನೆಗೆ ಹೋದನು. ೨ ನೆ ಆ ದ್ಯಾಯ, ಸಂಜನಾಡಿಯಲ್ಲಿ ಮೈಸೂರ ಕಡೆಯಿಂದ ವಲಸೆಹೋದ ಒಂದು ಬ್ರಾಹ್ಮಣ ಸಂಸಾರವಿತ್ತು. ಸದಾಶಿವದೀಕ್ಷಿತನೆಂಬ ಒಬ್ಬ ಬ್ರಾಹ್ಮಣನು ಮೈಸೂರಲ್ಲಿ ವಾಸವಾಗಿದ್ದನು. ಈತನ ಹಿರೀ ಹೆಂಡತಿಯು ಒಂದು ಗಂಡುಮಗುವನ್ನು ಹಡೆದು ಸತ್ತುಹೋದ ಳು. ಆಗ ಮಗುವಿಗೆ ಎರಡು ತಿಂಗಳಾಗಿತ್ತು. ಈತನಿಗೆ ಇದ್ದ ಳಾದ ಒಬ್ಬ ತಾಯಿವಿನಾ ಮತ್ತೆ ಯಾರೂ ಮನೆಯಲ್ಲಿ ದಿಕ್ಕಾ