ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೬ ಮಾಡಿದ್ದು ಸ್ಫೋ ಮಹಾರಾಯ ಹೋಗಿ ಸುನ್ನು ನೇ ಅಡಿಗೆ ಮನೆಯಲ್ಲಿ ಕೂತುಕೊಂಡಳು. ಊ ರವನ್ನು ಮಾಡು, ಯಾಕೋ ಮುಖ ಈ ದಿವಸ ಕೆದರಿಕೊಂಡಿದೆ ಎಂದು ಅಮ್ಮ ಹೇಳಿದರೂ ಅವಳೊಡನೆ ಮಾತನಾಡದೆ ಕೊ ನೆಗೆ ಎಂಜಲುಪವಾಸ ಮಾಡಿ ಎದ್ದಳು. ತರುವಾಯ ಯಾನಕೆಲ ಸಾ ಮಾಡುವುದಕ್ಕೂ ಮನಸ್ಸು ಬಾರದು; ನಡೆದ ವಿದ್ಯಾಸ ನನ್ನು ಯಾರಸಂಗಡ ಹೇಳಬೇಕು ? ಅಜ್ಜಿಗೆ ಹೇಳಿಕೊಂಡರೆ ಅವಳ ಕೈಯಲ್ಲಿ ಏನಾದೀತು ? ಏನೂ ಇಲ್ಲದೆ ಉರಿದುರಿದು ಬೀಳು ನ ಅತ್ತೆಗೆ ಹೇಳಿಕೊಂಡರೆ ಕೊಳ್ಳಿ ತೆಗೆದುಕೊಂಡು ತಲೆತುರಿ ಸಿಕೊಂಡಹಾಗೆ ಆಗಲಾರದೆ ? ಮಾವನಲ್ಲಿ ಹೇಳಿದ ಮರಾದೆ ಮಾರುವುದಿಲ್ಲವೆ ? ಗಂಡನಲ್ಲಿ ಹೇಳಿದರೆ ಮತ್ತೆ ಯಾವ ಪ್ರಮಾ ದವೂ ಉಂಟಾಗಲಾರದೆ? ಯಾರನಂಗಡ ತಾನೇ ಆಯಿತು, ಈಸಂ ಗತಿಯನ್ನು ಹೇಳಿಕೊಳ್ಳುವುದು ಹೇಗೆ ? ಎನೆಂದು ಹೇಳಿಕೊಳ್ಳು ವುದು ? ನೀಚನಾದ ಪರವುರುವ ತಾನು ಉಟ್ಟ ಬಟ್ಟೆಯನ್ನು ಹಿಡಿದು ಸೆಳೆದಮೇಲೆ ತನ್ನ ಪಾತಿವ್ರತ್ಯಕ್ಕೆ ಭಂಗಬಂತೆ ಇಲ್ಲವೆ ? ಇನ್ನು ತಾನು ಪ್ರಾಣವನ್ನು ಇರಿಸಿಕೊಂಡಿರಬೇಕೆ ? ಆತ್ಮ ಹತ್ಯ ಮಾಡಿಕೊಳ್ಳುವುದು ಉತ್ತಮವಲ್ಲವೆ ? ಆತ್ಮ ಹತ್ಯ ಮಹಾಪಾತಕ ನಲ್ಲವೆ ? ದುರ್ಮಾರ್ಗನಾದ ದುಶ್ಯಾಸನು ದ್ರಾಪದಿಯ ಸೀರೆಯ ನ್ನು ಎಳೆದು ಬಿಚ್ಚಿ ಹಾಕಿದನಷ್ಟೆ ? ಅವಳ ಪಾತಿವ್ರತ್ಯಕ್ಕೆ ಭಂಗ ಬರಲಿಲ್ಲವಷ್ಟೆ? ಆತ್ಮ ಹತ್ಯವನ್ನು ಮಾಡಿಕೊಳ್ಳಬೇಕೆಂದು ನಿಶ್ಚ ಯ ಮಾಡಿದರೆ ಇಷ್ಟು ಸುಂದರವಾಗಿರುವ ಗಂಡು ಮಗುವನ್ನು ಹೇಗೆ ಬಿಟ್ಟು ಹೋಗುವುದು ? ತಾನು ಪ್ರಾಣವನ್ನು ಕಳೆದುಕೊಂ ಡರೆ - ಏನೋ ಕೆಟ್ಟ ಕೆಲಸವನ್ನು ಮಾಡಿದಳು, ಅದು ಹೊರ