ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೦ ಮಾಡಿದ್ದು ಮಹಾರಾಯ. ಗಿದ್ದ ಚಿಕಿತ್ಸೆಯನ್ನೆಲ್ಲಾ ಮಾಡಿದರು. ನೆರೆ ಹೊರೆಯವರೆಲ್ಲಾ ಬಂದು ನೋಡಿ ಒಬ್ಬೊರು ಒಂದೊಂದು ಚಿಕಿತ್ಸೆಯನ್ನು ಮಾಡಿ ಸಿದರು. ನಂತ್ರ ಹಾಕಿದರು ಇಂದ್ರಾಕ್ಷಿ ಶಿರಕವಚವನ್ನು ಹೇಳಿ ವಿಭೂತಿ ರು. ವಿಷ್ಣು ಸಹಸ್ರನಾಮ ಪಾರಾಯಣಮಾಡಿ ಮಂತ್ರಾಕ್ಷತೆ ಹಾಕಿದರು. ಅಲಿತಾ ಸಹಸ್ರನಾಮವನ್ನು ಮಾಡಿ ಕುಂಕುಮವನ್ನು ಇಟ್ಟರು. ಏನೇನಮಾಡಿದರೂ ಜ್ಞಾನ ಬರ ಲಿಲ್ಲ. ಬಾಯಿಗೆ ಹಾಲನ್ನು ಹಾಕಿದರು, ಕಟವಾಯಲ್ಲಿ ಸೋರಿ ಹೋಯಿತು. ಬಾಯನ್ನು ಬಿಡಿಸಿ ನೋಡುವಾಗ ಹಲ್ಲು ಗಿಗಿ ರಿದು ಹೋಗಿತ್ತು. ತಿಮ್ಮಮ್ಮ ನು-ಅವಳಿಗೇನು ಉಪಚಾರ, ಎಲ್ಲರೂ ತನ್ನ ಸೇವೆ ಮಾಡುತಾರೆಯೆ ಬಿಡುತಾರೆಯೆ ನೋಡಬೇ ಕೆಂದು ಹಾಗೆ ಬಿದ್ದಿದಾಳೆ, ಚೆನ್ನಾಗಿ ನರಕಾಸಿ ಬರೇ ಹಾಕಿದರೆ ತಾನೇ ಏಳುತಾಳೆ ಎಂದಳು ! ಮೂಗು ಕರೆಯಾಗಿರ ಬಹು ದೆಂದು ಯೋಚಿಸಿ ಅಂಗಾಲಿಗೆ ದುಂಬಿ ಹುರಿಯನ್ನು ಬಿಟ್ಟು ಬರೆ ಯನ್ನು ಹಾಕಿದರು. ಬಳೆ ಚೂರಿನಲ್ಲಿ ಚಿರಗಿಹಾಕಿದರು. ಯಾ ವುದು ಮಾಡಿದರೂ ರಾ ಎಂದು ಕೂಡ ಅನ್ನಲಿಲ್ಲ. ಆಗ ಕೂಡ ಅತ್ತೆಯು- ಅಗ್ನಿಸ್ಥಂಭ ಸ್ತಂಭವನ್ನು ಕಲಿತವಳು, ಅವಳಿಗೆ ಇದೆಲ್ಲಾ ಯಾವ ಮೂಲೆನೋ ಎಂದು ಆಡಿದಳು. ಮಗುವಾದ ಕೃಷ್ಣಸ್ವಾಮಿಗೆ ತಾಯನ್ನು ಕಾಣದೆ, ತಾಯಿ ಸಂಗಡ ಮಾತಾ ಡದೆ ಹುಚ್ಚು ಹಿಡಿದಹಾಗೆ ಆಗಿತ್ತು. ಎದೆ ಹಾಲನ್ನು ಕುಡಿದು ಬಹಳ ಹೊತ್ತಾಗಿತ್ತು. ಆ ಮಗುವಿಗೆ ಅನ್ನ, ಪಾಚಿ, ಬಾ, ಇವೇ ಮೊದಲಾದ ಮರು ನಾಲ್ಕು ಮಾತುಗಳು ಬರುತ್ತಿದ್ದವು. ಮಗು ತಾಯ ಬಳಿಗೆ ಹೋಗಿ ಸ್ತನ್ಯ ಪಾನಮಾಡಬೇಕೆಂದು ಅಳುವು "