ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೨ ಮಾಡಿದ್ದು ಣೋ ಮಹಾರಾಯ, ಆಗಾಗ್ಗೆ ಮಾಡುವುದಕ್ಕೂ ಆರಂಭಿಸಿದಳು. ಆದರೆ ಪ್ರಯೋಜನ ವೇನು? ಇವಳ ಕೆಲಸವೆಲ್ಲಾ ಕೊಳ್ಳಿ ತೆಗೆದುಕೊಂಡು ತಲೇ ತು ರಿಸಿಕೊಳ್ಳುವ ಕೆಲಸವೇ ಆಗಿತ್ತು, ಆಗ ನಿಮ್ಮ ಮೈ ನು-ಸಾವಿರ ಔಷಧಿಮಾಡಿ ಪ್ರಯೋಜನವೇನು? ಅನ್ನು ನಗುಡಿಗೆ ಹೋಗಿ ಅಪ್ಪಾ ಜಿಯ ಬಾಯಲ್ಲಿ ಕಣಿ ಕೇಳಿದರೆ ಎಲ್ಲಾ ಗೊತ್ತಾಗುತ್ತೆ, ಎಂದು ಕೊಂಡು, ಎಲೇ ಅಡಕೆ ಕರ್ಪೂರ ಸಾಂಬ್ರಾಪಿ ತೆಂಗಿನಕಾಯಿ ಬಾ ಈ ಹಂಣು ಎರಡು ದುಡ್ಡು ದಕ್ಷಿಣೆ ಇಲ್ಲವನೂ ತಯಲ್ಲಿರಿಸಿ ಕೊಂಡು ಗುಡಿಗೆ ಹೋಗಿ ಸಿದ್ದನನುಂದೆ ಆ ತಯನ್ನು ಇರಿಸಿ ಅಪ್ಪಾಜಿ, ನಮ್ಮ ಸೀತಮ್ಮ ಜ್ಞಾನಮಾನವಿಲ್ಲದೆ ಬಿಟ್ಟ ದಾ ಳಲಾ, ಇದೇನು ಪೀಡಯೇ, ಪಿಶಾಚಿಯ, ಜನ್ಮಾಂತರದ ಕಾರ್ತಿವೆ, ದೇವರಕಡೇದೆ, ಮನುಷ್ಯರಕಡೇದೆ ? ಇದು ಗುಣವಾಗುತ್ತೆ. ಇ ಲ್ಲವೆ ? ಕಣಿ ಹೇಳು ಎಂದಳು. ಆಂಜನೇಯನು ಕಾಲನೇಮಿಯ ನ್ನು ಕುರಿತು ಸಂಜೀವನ ಪರತಕ್ಕೆ ದಾರಿಯನ್ನು ಕೇಳಿದಹಾಗಣ ಯಿತು. ಆ ದುರ್ಮಾರ್ಗನು ಬಯಸಿದಂತೆ ಆಯಿತು. ಅವ ನು ಚಜ್ಞಾಕನಾಗಿ ಕೂತುಕೊಂಡು ಬಲಗೈಯಲ್ಲಿ ಬೆಳ್ಳಿ ಕಯ್ಯ ಹಾಕಿದ ತುಂಡು ಬತ್ತವನ್ನು ಹಿಡಿದು ಅದನ್ನು ನೆಲದಮೇಲೆ ಬಡಿ ಯುತಾ ಯಡಗೈಯಲ್ಲಿ ಕಬ್ಬಿಣದ ಉಂಗುರಗಳ ಒಡಿಯನ್ನು ಅಳ್ಳಾಡಿಸುತಾ ಮೊದಲು ದೇವರುಗಳನ್ನೂ ದೇವತೆಗಳನ್ನೂ ಆ ಮೇಲೆ ಮಾರಿ ಮಸಣಿಯರನ್ನೂ ಆವಾಹನೆ ಮಾಡಿ ರಾಗವಾಗಿ ಕಣಿ ಹೇಳುತಾ ನೀವು ಜೀವಚಿಂತೆಗಾಗಿ ಪ್ರಶ್ನೆ ಮಾಡಿದೀರಿ, ಇದು ರೋಗವಲ್ಲ, ದೇವರಕಡೆಯದಲ್ಲ, ಮನುಷ್ಯರ ಕಡೇದಲ್ಲ, ಆಲಸಿಗೆ ಏನೂ ಇಲ್ಲ, ಮನುಷ್ಯರ ಮನಸ್ಸಿನ ಅಡಿಯಾಳವನ್ನು ನೋಡುವು